ADVERTISEMENT

ಬುಕ್ ಬ್ರಹ್ಮ ಕಥಾ ಸ್ಪರ್ಧೆ: ಸುಲ್ತಾನ್ ಮನ್ಸೂರ್ ಪ್ರಥಮ

​ಪ್ರಜಾವಾಣಿ ವಾರ್ತೆ
Published 9 ಆಗಸ್ಟ್ 2025, 16:16 IST
Last Updated 9 ಆಗಸ್ಟ್ 2025, 16:16 IST
ಸುಲ್ತಾನ್‌ ಮನ್ಸೂರ್
ಸುಲ್ತಾನ್‌ ಮನ್ಸೂರ್   

ಬೆಂಗಳೂರು: ಬುಕ್‌ ಬ್ರಹ್ಮ ಸಂಸ್ಥೆ ಹಮ್ಮಿಕೊಂಡಿದ್ದ ‘ಬುಕ್ ಬ್ರಹ್ಮ ಸ್ವಾತಂತ್ರೋತ್ಸವ’ ಕಥಾ ಸ್ಪರ್ಧೆಯಲ್ಲಿ ಸುಲ್ತಾನ್‌ ಮನ್ಸೂರ್ ಅವರ ‘ಪೆರೇಡ್ ಪೊಡಿಮೋನು’ ಕಥೆ ಪ್ರಥಮ ಬಹುಮಾನ ಪಡೆದುಕೊಂಡಿತು.

ಕೋರಮಂಗಲದ ಸೇಂಟ್‌ ಜಾನ್ಸ್ ಸಭಾಂಗಣದಲ್ಲಿ ನಡೆಯುತ್ತಿರುವ ‘ಬುಕ್ ಬ್ರಹ್ಮ ಸಾಹಿತ್ಯ ಉತ್ಸವ’ದ ಎರಡನೇ ದಿನವಾದ ಶನಿವಾರ ಸಂಜೆ ಹಮ್ಮಿಕೊಂಡಿದ್ದ  ಕಾರ್ಯಕ್ರಮದಲ್ಲಿ ವಿಜೇತರ ಹೆಸರು ಘೋಷಿಸಿ, ಬಹುಮಾನ ಪ್ರದಾನ ಮಾಡಲಾಯಿತು.

ಸದಾಶಿವ ಸೊರಟೂರು ಅವರ ‘ಬೆಳಕು ಕುಡಿದ ಸಂಜೆ’ ಕಥೆ ದ್ವಿತೀಯ ಬಹುಮಾನ ಹಾಗೂ ದಾದಾಪೀರ್‌ ಜೈಮನ್ ಅವರ ‘ದಿಗಿಲು’ ಕಥೆ ತೃತೀಯ ಬಹುಮಾನಕ್ಕೆ ಭಾಜನವಾಯಿತು. ಈ ಬಹುಮಾನಗಳು ಫಲಕದ ಜತೆಗೆ ಕ್ರಮವಾಗಿ ₹ 50 ಸಾವಿರ, ₹ 25 ಸಾವಿರ ಹಾಗೂ ₹ 15 ಸಾವಿರ ನಗದು ಒಳಗೊಂಡಿವೆ. 

ADVERTISEMENT

ಅಕ್ಷತಾ ಕೃಷ್ಣಮೂರ್ತಿ ಅವರ ‘ಬೆಟ್ಟದ ದಾರಿ’, ಸಂಜೋತಾ ಪುರೋಹಿತ ಅವರ ‘ಮಿಷನ್ ಪೀಕ್’, ಲಿಂಗರಾಜ ಸೊಟ್ಟಪ್ಪನವರ ಅವರ ‘ಮೈದಾನ’, ವಿನುತಾ ಕೆ.ಆರ್. ಅವರ ‘ದೇಸಮ್ಯಾಲ ಮಕ್ಳು’ ಹಾಗೂ ರೇಣುಕಾ ರಮಾನಂದ ಅವರ ‘ಉಘಡಾ ಉಘಡೀ’ ಕಥೆ ಸಮಾಧಾನಕರ ಬಹುಮಾನ ಪಡೆದುಕೊಂಡಿತು. ಈ ಬಹುಮಾನ ತಲಾ ₹ 5 ಸಾವಿರ ನಗದು ಹಾಗೂ ಫಲಕವನ್ನು ಒಳಗೊಂಡಿದೆ. 

ಮೆಚ್ಚುಗೆ ಬಹುಮಾನ: ಕೆ. ಕರಿಸ್ವಾಮಿ ಅವರ ‘ಲೆವೆಲ್ ಕ್ರಾಸಿಂಗ್’, ರವಿ ಶಿವರಾಯಗೋಳ ಅವರ ‘ಶಬ್ದ’, ಮೋದೂರು ತೇಜ ಅವರ ‘ದವನ’, ಸಂತೆಬೆನ್ನೂರು ಫೈಜ್ನಟ್ರಾಜ್ ಅವರ ‘ಅಂಗ ಅನಂಗವೆಂಬೆರಡೂ…’, ಮಲ್ಲಮ್ಮ ಜೊಂಡಿ ಅವರ ‘ನೆರಳು’, ಸುಧಾ ಆಡುಕಳ ಅವರ ‘ಯೋಜನಗಂಧಿ’, ಶ್ರೀಧರ ಪತ್ತಾರ ಅವರ ‘ಬೆಲ್ಲಾರೋಜ್’, ಅನುಪಮಾ ಬೆಣಚಿನಮರ್ಡಿ ಅವರ ‘ಪರ್ಪಲ್ ಸಮಯ’, ಪ್ರವೀಣ್‌ ಕುಮಾರ್‌ ಜಿ. ಅವರ ‘ಲಕ್’, ಪಾಪುಗುರು ಅವರ ‘ಸೀತೆ ಮತ್ತೆ ಒಂಟಿಯಾದಳು’, ಯಶಸ್‌ ನಗರ ಅವರ ‘ಬೆಂಕಿ ಹುಳ’, ಅನಿಲ್‌ ಗುನ್ನಾಪುರ ಅವರ ‘ಬಸವ ನಿಲಯ’, ಟಿ.ಎಸ್.‌ ಶ್ರವಣಕುಮಾರಿ ಅವರ ‘ಕಸಿ’, ಈಶ್ವರ ಎಂ. ಅವರ ‘ಕತೆ ಇಲ್ಲಿಂದಾಚೆ ಶುರು…’, ಲಕ್ಷ್ಮಣ್‌ ವಿ.ಎ. ಅವರ ‘ರಾಮ್ ತೇರಿ ಗಂಗಾ ಮೈಲಿ’, ಎಸ್.‌ ನಾಗಶ್ರೀ ಅಜಯ್ ಅವರ ‘ಇತಿ ವೃತ್ತ’ ಹಾಗೂ ಚಿಕ್ಕೋಬನಹಳ್ಳಿ ಚಾಂದ್‌ ಬಾಷ ಅವರ ‘ದೇವರ ಹೂ’ ಮೆಚ್ಚುಗೆ ಬಹುಮಾನ ಪಡೆದ ಕಥೆಗಳಾಗಿವೆ. ಈ ಬಹುಮಾನ ತಲಾ ₹ 2 ಸಾವಿರ ನಗದು ಹಾಗೂ ಫಲಕವನ್ನು ಒಳಗೊಂಡಿತ್ತು.

ಸದಾಶಿವ ಸೊರಟೂರು
ದಾದಾಪೀರ್‌ ಜೈಮನ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.