ಬೆಂಗಳೂರು: ಬುಕ್ ಬ್ರಹ್ಮ ಸಂಸ್ಥೆಯು 2025ನೇ ಸಾಲಿನ ‘ಸ್ವಾತಂತ್ರ್ಯೋತ್ಸವ ಕಥಾ ಸ್ಪರ್ಧೆ’ಗೆ ಕಥೆಗಳನ್ನು ಹಾಗೂ ‘ಕಾದಂಬರಿ ಪುರಸ್ಕಾರ’ಕ್ಕೆ ಕಾದಂಬರಿಗಳನ್ನು ಆಹ್ವಾನಿಸಿದೆ.
2024ರಲ್ಲಿ ಪ್ರಕಟಗೊಂಡ ಕಾದಂಬರಿಗಳನ್ನು ಸ್ಪರ್ಧೆಗೆ ಪರಿಗಣಿಸಲಾಗುತ್ತದೆ. ಈ ಪುರಸ್ಕಾರವು ₹ 1 ಲಕ್ಷ ನಗದು ಒಳಗೊಂಡಿದೆ. ಈ ಮೊತ್ತದಲ್ಲಿ ಲೇಖಕರಿಗೆ ₹ 75 ಸಾವಿರ ಹಾಗೂ ಪ್ರಕಾಶಕರಿಗೆ ₹ 25 ಸಾವಿರ ನೀಡಲಾಗುತ್ತದೆ. ಮೆಚ್ಚುಗೆ ಪಡೆಯುವ ನಾಲ್ಕು ಕಾದಂಬರಿಗಳಿಗೆ ತಲಾ ₹ 5 ಸಾವಿರ ನೀಡಲಾಗುವುದು ಎಂದು ಸಂಸ್ಥೆ ತಿಳಿಸಿದೆ.
ಕಥಾ ಸ್ಪರ್ಧೆಗೆ ಅಪ್ರಕಟಿತ ಕಥೆಗಳನ್ನು ಪರಿಗಣಿಸಲಾಗುತ್ತದೆ. ಪ್ರಥಮ ಸ್ಥಾನ ಪಡೆದ ಕಥೆಗೆ ₹ 50 ಸಾವಿರ, ದ್ವಿತೀಯ ಸ್ಥಾನ ಪಡೆದ ಕಥೆಗೆ ₹ 25 ಸಾವಿರ, ತೃತೀಯ ಸ್ಥಾನ ಪಡೆದ ಕಥೆಗೆ ₹ 15 ಸಾವಿರ ನಗದು ಇರಲಿದೆ. ಐದು ಕಥೆಗಳಿಗೆ ತಲಾ ₹ 5 ಸಾವಿರ ನಗದು ಒಳಗೊಂಡ ಸಮಾಧಾನಕರ ಬಹುಮಾನ ನೀಡಲಾಗುತ್ತದೆ. ಅಂತಿಮ ಸುತ್ತಿಗೆ ಆಯ್ಕೆಯಾಗುವ 17 ಕಥೆಗಳಿಗೆ ತಲಾ ₹ 2 ಸಾವಿರ ರೂಪಾಯಿ ನೀಡಲಾಗುತ್ತದೆ. ಆಯ್ಕೆಯಾದ 25 ಕಥೆಗಳನ್ನು ಒಳಗೊಂಡ ಪುಸ್ತಕ ಪ್ರಕಟಿಸಲಾಗುತ್ತದೆ ಎಂದು ಹೇಳಿದೆ.
ಕಾದಂಬರಿಗಳ ನಾಲ್ಕು ಪ್ರತಿಗಳನ್ನು ಕಳಿಸಲು ಮೇ 1 ಹಾಗೂ ಕಥೆಗಳನ್ನು ಕಳುಹಿಸಲು ಮೇ 15 ಕಡೆಯ ದಿನ. ಕಥೆಗಳನ್ನು ಇ ಮೇಲ್ bbks2025@bookbrahma.com ಮೂಲಕವೂ ಕಳಿಸಬಹುದು.
ಕಳುಹಿಸಬೇಕಾದ ವಿಳಾಸ: ಪ್ರಧಾನ ಸಂಪಾದಕ, ಬುಕ್ ಬ್ರಹ್ಮ ಕನ್ನಡ, ಮೂರನೇ ಮಹಡಿ, ಆರ್.ಕೆ. ಕಾಂಪ್ಲೆಕ್ಸ್, ಕೆಎಸ್ಎಸ್ಐಡಿಸಿ ಆವರಣ, ಎಲೆಕ್ಟ್ರಾನಿಕ್ಸ್ ಸಿಟಿ, ಮೊದಲ ಹಂತ, ಬೆಂಗಳೂರು-560100. ಸಂಪರ್ಕ ಸಂಖ್ಯೆ: 78926 08118
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.