
ಬೆಂಗಳೂರು: ಸಿ.ಆರ್. ಗೋಪಾಲ್ ಅವರ ‘ದಾಸಸಾಹಿತ್ಯ ಪ್ರಣೀತ ಅಭ್ಯುದಯದ ಆಯಾಮಗಳು’ ಮತ್ತು ‘ಸಮಾಜಕಾರ್ಯದ ಪಕ್ಷಿನೋಟ’, ಅಶೋಕ ಆರ್. ಅವರ ‘ಮನಸ್ಸು ಮುನ್ನುಡಿ’ ಕೃತಿಗಳು ಜನಾರ್ಪಣೆಗೊಂಡವು.
ನಿರುತ ಪಬ್ಲಿಕೇಷನ್ಸ್, ಬೆಂಗಳೂರು ಯೂನಿವರ್ಸಿಟೀಸ್ ಸೋಶಿಯಲ್ ವರ್ಕರ್ಸ್ ಅಲುಮ್ನಿ ಅಸೋಸಿಯೇಷನ್ ಹಾಗೂ ಸಮಾಜಕಾರ್ಯ ವಿಭಾಗ, ಬೆಂಗಳೂರು ನಗರ ವಿಶ್ವವಿದ್ಯಾಲಯದ ವತಿಯಿಂದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಮೈಸೂರು ವಿಶ್ವವಿದ್ಯಾಲಯ ಪ್ರಸಾರಾಂಗದ ಸಹಾಯಕ ನಿರ್ದೇಶಕ ಅನಿಲ್ ಕುಮಾರ್ ಬೊಮ್ಮಘಟ್ಟ, ಬೆಂಗಳೂರು ನಗರ ವಿಶ್ವವಿದ್ಯಾಲಯ ಸಮಾಜಕಾರ್ಯ ವಿಭಾಗದ ಅಧ್ಯಾಪಕಿ ಸುಜಾತಾ ಎಂ. ಕೃತಿಗಳನ್ನು ಪರಿಚಯಿಸಿದರು.
ಡಾ. ಮನಮೋಹನ್ ಸಿಂಗ್ ಬೆಂಗಳೂರು ನಗರ ವಿಶ್ವವಿದ್ಯಾಲಯದ ಕುಲಪತಿ ಬಿ. ರಮೇಶ್, ಕೃತಿಕಾರರಾದ ಸಿ.ಆರ್. ಗೋಪಾಲ್, ಅಶೋಕ ಆರ್., ನಿರುತ ಪಬ್ಲಿಕೇಷನ್ಸ್‌ನ ರಮೇಶ್ ಎಂ.ಎಚ್, ಬರಹಗಾರರಾದ ಗೀತಾಚಾರ್ಯ, ಜಿ.ಪಿ. ನಾಯಕ, ಶೇಖರ್ ಗಣಗಲೂರು, ಸುಜಾತಾ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.