ADVERTISEMENT

‘ಕುವೆಂಪು ಹನುಮದ್ದರ್ಶನ’ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 12 ಜುಲೈ 2020, 19:31 IST
Last Updated 12 ಜುಲೈ 2020, 19:31 IST
ಸಿ.ಎನ್.ಅಶ್ವತ್ಥನಾರಾಯಣ ಅವರು ಪುಸ್ತಕ ಬಿಡುಗಡೆಗೊಳಿಸಿದರು.
ಸಿ.ಎನ್.ಅಶ್ವತ್ಥನಾರಾಯಣ ಅವರು ಪುಸ್ತಕ ಬಿಡುಗಡೆಗೊಳಿಸಿದರು.   

ಬೆಂಗಳೂರು: ಸಾಹಿತಿ ಜಿ.ಕೃಷ್ಣಪ್ಪ ರಚಿಸಿರುವ 'ಕುವೆಂಪು ಹನುಮದ್ದರ್ಶನ' ಪುಸ್ತಕವನ್ನು ಉಪಮುಖ್ಯಮಂತ್ರಿ ಸಿ.ಎನ್.ಅಶ್ವತ್ಥನಾರಾಯಣ ಅವರು ಭಾನುವಾರ ಆನ್‌ಲೈನ್‌ ಕಾರ್ಯಕ್ರಮದ ಮೂಲಕ ಬಿಡುಗಡೆ ಮಾಡಿದರು.

ಉದಯಭಾನು ಕಲಾ ಸಂಘ ಈ ಕಾರ್ಯಕ್ರಮ ಹಮ್ಮಿಕೊಂಡಿತ್ತು. ವಿಮರ್ಶಕ ವಿ.ಚಂದ್ರಶೇಖರ ನಂಗಲಿ ಮಾತನಾಡಿ, 'ಸಾಹಿತ್ಯದಲ್ಲಿ ಮೂಡಿಬಂದ ರಾಮಾಯಣಗಳನ್ನು ಓದಿ ಜೀವನದ ಮೌಲ್ಯಗಳನ್ನು ಅರ್ಥೈಸಿಕೊಳ್ಳುವ ಬದಲಿಗೆ ವಾಣಿಜ್ಯೀಕರಣ ದೃಷ್ಟಿಯಲ್ಲಿ ಟಿ.ವಿಗಳಲ್ಲಿ ಪ್ರಸಾರವಾಗುವ ಅರೆಬರೆ ರಾಮಾಯಣ ನೋಡಿ ಆನಂದಿಸಲಾಗುತ್ತಿದೆ'ಎಂದರು.

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್.ನಾಗಾಭರಣ, ಹಿರಿಯ ಕಲಾವಿದ ಚಂದ್ರನಾಥ ಆಚಾರ್ಯ, ಅಖಿಲ ಕರ್ನಾಟಕ ಮಹಮದೀಯರ ಕನ್ನಡ ವೇದಿಕೆ ಅಧ್ಯಕ್ಷ ಸಮೀವುಲ್ಲಾ ಖಾನ್ ಇದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.