ADVERTISEMENT

ಬ್ರ್ಯಾಂಡ್ ಬೆಂಗಳೂರು ದಾರಿ ಹತ್ತಾರು | ಕಸ ಕಿಯೋಸ್ಕ್‌: ವಿಲೇವಾರಿಗೆ ಹೊಸ ದಾರಿ

ಬೆಳಿಗ್ಗೆ 6ರಿಂದ ರಾತ್ರಿ 8ರವರೆಗೆ ತ್ಯಾಜ್ಯ ಸಂಗ್ರಹ76 ಸ್ಥಳಗಳಲ್ಲಿ ಆರಂಭ ಪ್ರತಿ ಕಿಯೋಸ್ಕ್‌ಗೆ ₹5 ಲಕ್ಷ ವೆಚ್ಚಸರ್ಕಾರದ ಅನುಮೋದನೆ ಬಾಕಿ

Published 19 ಡಿಸೆಂಬರ್ 2022, 22:31 IST
Last Updated 19 ಡಿಸೆಂಬರ್ 2022, 22:31 IST
ಬಿಬಿಎಂಪಿ ಸ್ಥಾಪಿಸಲಿರುವ ‘ಕಸ ಕಿಯೋಸ್ಕ್‌’ ಮಾದರಿ
ಬಿಬಿಎಂಪಿ ಸ್ಥಾಪಿಸಲಿರುವ ‘ಕಸ ಕಿಯೋಸ್ಕ್‌’ ಮಾದರಿ   

ಬೆಂಗಳೂರು: ನಗರದ ರಸ್ತೆಗಳಲ್ಲಿ ಕಸ ಎಸೆಯುವುದು ಸಾಮಾನ್ಯವಾಗಿದೆ. ಮನೆಗೆ ಬಂದು ಕಸ ಸಂಗ್ರಹಿಸಿದರೂ ಜನರು ಅದಕ್ಕೆ ಸ್ಪಂದಿಸುತ್ತಿಲ್ಲ. ಬೆಳಿಗ್ಗೆ ಅಥವಾ ಸಂಜೆ ಮನೆಯ ಕಸವನ್ನು ಯಾವುದಾದರೂ ರಸ್ತೆ ಬದಿ, ಖಾಲಿ ನಿವೇಶನಗಳಲ್ಲಿ ಎಸೆದುಹೋಗುವವರು ಹಲವರು. ಇಂತಹ ತಾಣಗಳು ಇಲ್ಲದಂತೆ ಮಾಡಲು ನಗರದಲ್ಲಿ ‘ಕಸ ಕಿಯೋಸ್ಕ್‌’ ಆರಂಭವಾಗುತ್ತಿವೆ.

ಎಲ್ಲೆಂದರಲ್ಲಿ ತ್ಯಾಜ್ಯ ಹಾಕದಂತೆ ಮಾಡುವ ವ್ಯವಸ್ಥೆ ‘ಕಸ ಕಿಯೋಸ್ಕ್‌‘.ಬಿಬಿಎಂಪಿವ್ಯಾಪ್ತಿಯಲ್ಲಿ ಗುರುತಿಸ ಲಾದ ತ್ಯಾಜ್ಯದ ‘ಬ್ಲ್ಯಾಕ್‌ ಸ್ಪಾಟ್‌’ಗಳ ನಿರ್ಮೂಲನೆಗೆ ದಿನದ ಯಾವುದೇ ಸಮಯದಲ್ಲಿಕಸನೀಡಲು ಜನರಿಗೆ ಅವಕಾಶ ಕಲ್ಪಿಸಲಿದೆ ‘ಕಸ ಕಿಯೋಸ್ಕ್‌’.

ನಗರದ ಹಲವೆಡೆ ನಾಗರಿಕರು ರಸ್ತೆ ಬದಿಯೇ ಕಸ ಎಸೆಯುತ್ತಿದ್ದು, ಇಂತಹ ಸ್ಥಳಗಳನ್ನು ‘ಬ್ಲ್ಯಾಕ್‌ ಸ್ಪಾಟ್‌’ ಎಂದು ಗುರುತಿಸಲಾಗಿದೆ. ಹಲವೆಡೆ ಇಂಥ ಸ್ಥಳಗಳನ್ನು ಗುಡಿಸಿ, ಸಾರಿಸಿ, ರಂಗೋಲಿ ಬಿಡಿಸಿ, ಕಸ ಹಾಕಬೇಡಿ ಎಂದು ಪೌರಕಾರ್ಮಿಕರು ಕೋರುತ್ತಿದ್ದಾರೆ. ಇದು ಅಭಿಯಾನದಂತೆ ನಡೆಯುತ್ತಿದೆ. ಕೆಲವೆಡೆ ದೇವರ ಚಿತ್ರಗಳನ್ನೂ ಅಳವಡಿಸಲಾಗಿದೆ. ಆದರೆ ರಸ್ತೆಯಲ್ಲಿ ಕಸ ಎಸೆಯುವುದು ತಪ್ಪಿಲ್ಲ. ಇದನ್ನು ತಪ್ಪಿಸಲು ಪ್ರಮುಖ 76 ಸ್ಥಳಗಳಲ್ಲಿ ‘ಕಸ ಕಿಯೋಸ್ಕ್‌’ ಸ್ಥಾಪಿಸಲಾಗುತ್ತಿದೆ.

ADVERTISEMENT

3x2 ಮೀಟರ್‌ ಅಳತೆ ಜಾಗದಲ್ಲಿ ಆಯತಾಕಾರದಲ್ಲಿಪೋಲ್‌ಗಳಿಂದ ‘ಸೂಪರ್‌ ಸ್ಟ್ರಕ್ಚರ್‌’ನಲ್ಲಿ ‘ಕಸ ಕಿಯೋಸ್ಕ್‌’ ನಿರ್ಮಿಸಲಾಗುತ್ತದೆ. ತಲಾ 200 ಲೀಟರ್‌ ಸಾಮರ್ಥ್ಯದ ಭಿನ್ನ ಬಣ್ಣಗಳ ಆರು ಡಬ್ಬಗಳನ್ನು ಇರಿಸಲಾಗುತ್ತದೆ. ಒಣ, ಹಸಿ ಸೇರಿ ನಾಲ್ಕು ರೀತಿಯ ಕಸವನ್ನು ಪ್ರತ್ಯೇಕವಾಗಿ ಸಂಗ್ರಹಿಸಲಾಗುತ್ತದೆ. ಇದರ ನಿರ್ವಹಣೆಗೆ ಒಬ್ಬ ಸಿಬ್ಬಂದಿ ಇರುತ್ತಾರೆ. ಪ್ರತಿ ಘಟಕದ ವೆಚ್ಚ
ತಲಾ ₹5 ಲಕ್ಷ.

‘ಶುಭ್ರ ಬೆಂಗಳೂರು’ ಅನುದಾನದಲ್ಲಿ 76 ಘಟಕಗಳ ಸ್ಥಾಪನೆಗೆ ಬಿಬಿಎಂಪಿಯಘನತ್ಯಾಜ್ಯ ನಿರ್ವಹಣೆ ವಿಭಾಗದಿಂದ ಟೆಂಡರ್‌ ಕರೆದು, ಅಂತಿಮಗೊಳಿಸಿ ಎರಡು ತಿಂಗಳ ಹಿಂದೆಯೇ ಅನುಮೋದನೆಗೆ ಸರ್ಕಾರಕ್ಕೆ ಕಳುಹಿಸಲಾಗಿದೆ. ಇನ್ನು ಅನುಮೋದನೆ ಸಿಗಬೇಕಿದೆ.

‘ಬಿಬಿಎಂಪಿ ಉದ್ಯಾನ, ಕಚೇರಿ, ವಾರ್ಡ್‌ ಕಚೇರಿ ಇತ್ಯಾದಿ ಪ್ರದೇಶಸೇರಿ ಎಲ್ಲೆಲ್ಲಿ ಸ್ಥಳಾವಕಾಶ ಇದೆಯೋ ಅಲ್ಲಿ ‘ಕಸ ಕಿಯೋಸ್ಕ್‌’ಸ್ಥಾಪಿಸ ಲಾಗುತ್ತದೆ. ಇಲ್ಲಿ ಸಂಗ್ರಹವಾಗುವ ತ್ಯಾಜ್ಯವನ್ನುಆಟೊಗಳಲ್ಲಿ ಒಯ್ಯಲಾ ಗುತ್ತದೆ. ‘ಕಸ ಕಿಯೋಸ್ಕ್‌’ ಪ್ರತಿದಿನ ಬೆಳಿಗ್ಗೆ 6ರಿಂದ ರಾತ್ರಿ 8ರವರೆಗೆ ಕಾರ್ಯನಿರ್ವಹಿಸಲಿದೆ. ಜನರು ರಸ್ತೆಯಲ್ಲಿ ಕಸಎಸೆಯಬಾರದುಎಂಬ ಉದ್ದೇಶದಿಂದ 14 ತಾಸು ‘ಕಸ ಕಿಯೋಸ್ಕ್‌’ ತ್ಯಾಜ್ಯ ಸಂಗ್ರಹಿಸ ಲಿದೆ’ಎಂದುಬಿಬಿಎಂಪಿ ಘನತ್ಯಾಜ್ಯ ವಿಭಾಗದ ವಿಶೇಷ ಆಯುಕ್ತ
ಡಾ. ಹರೀಶ್‌ಕುಮಾರ್‌ ತಿಳಿಸಿದರು.

ಸಾಹಸ್‌ ಮಾದರಿ: ಸಾಹಸ್‌ ಎಂಬ ಎನ್‌ಜಿಒ ತನ್ನದೇ ವೆಚ್ಚದಲ್ಲಿ ನಗರದಲ್ಲಿ ಎರಡು ಪ್ರದೇಶಗಳಲ್ಲಿ ಕಸ ಸಂಗ್ರಹಿಸುವ ಕಿಯೋಸ್ಕ್‌ಗಳನ್ನು ಸ್ಥಾಪಿಸಿದೆ. ಈ ಕೇಂದ್ರಗಳು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದು, ಇವೇ ಬಿಬಿಎಂಪಿಗೆ ಮಾದರಿಯಾಗಿವೆ. ಹೀಗಾಗಿ ‘ಶುಭ್ರ ಬೆಂಗಳೂರು’ ಅನುದಾನದಲ್ಲಿ ‘ಕಸಕಿಯೋಸ್ಕ್‌’ ಸ್ಥಾಪನೆಗೆ ಮುಂದಾಗಿದೆ.

ನಾಗರಿಕರಿಗೆವಿಶೇಷ ಸೌಲಭ್ಯ!

‘ನಗರದಲ್ಲಿ ನಾಗರಿಕರು ಕಸವನ್ನು ಬಿಸಾಡುವ ಹಲವು ‘ಬ್ಲ್ಯಾಕ್‌ ಸ್ಟಾಟ್‌’ಗಳಿವೆ. ಸಾರ್ವಜನಿ ಕರಿಗೆಅನುಕೂಲ ಕಲ್ಪಿಸಲು ಈ ಸೌಲಭ್ಯ ಒದಗಿಸಲಾಗುತ್ತಿದ್ದು, ಸರ್ಕಾರದಿಂದ ಟೆಂಡರ್‌ಗೆ ಅನುಮೋದನೆ ಬಂದ ಕೂಡಲೇ ಪ್ರಾರಂಭಿಸಲಾಗುತ್ತದೆ. ನಾಗರಿಕರು ತಮ್ಮ ಜವಾಬ್ದಾರಿಯನ್ನು ಅರಿಯಬೇಕು. ಎಲ್ಲೆಂದರಲ್ಲಿ ಕಸ ಬಿಸಾಡಬಾರದು ಎಂದು ಸಾಕಷ್ಟು ಅರಿವು ಮೂಡಿಸಲಾಗುತ್ತಿದೆ’ ಎಂದುಬಿಬಿಎಂಪಿಘನತ್ಯಾಜ್ಯ ವಿಭಾಗದ ವಿಶೇಷ ಆಯುಕ್ತಡಾ. ಹರೀಶ್‌ಕುಮಾರ್‌ ತಿಳಿಸಿದರು.

ಬಿಸಾಡಬೇಡಿ, ಕಿಯೋಸ್ಕ್‌ಗೆ ಕೊಡಿ!

‘ಬೆಳಿಗ್ಗೆಯೇ ಕೆಲಸಕ್ಕೆಹೋಗಿರುತ್ತೇವೆ. ಕಸಕೊಂಡೊಯ್ಯುವವರುಬಂದಾಗ ನಾವು ಮನೆಯಲ್ಲಿ ಇರುವುದಿಲ್ಲ. ಹೊರಗೆ ಇಟ್ಟರೆ ನಾಯಿಗಳು ಗಲೀಜು ಮಾಡುತ್ತವೆ. ಮನೆಯಲ್ಲಿ ಇಟ್ಟರೆ ವಾಸನೆ. ಹೀಗಾಗಿ ಅನಿವಾರ್ಯವಾಗಿ ಆಗಾಗ ರಸ್ತೆಯಲ್ಲಿ, ಅಲ್ಲಲ್ಲಿ ಕಸ ಬಿಸಾಡುವುದಾಗಿ ಹಲವು ನಾಗರಿಕರು ಸಬೂಬು ಹೇಳುತ್ತಾರೆ. ಈಗ ಅದಕ್ಕೆ ಅವಕಾಶವಿಲ್ಲ. ಕಿಯೋಸ್ಕ್‌ ಬೆಳಿಗ್ಗೆ ಆರು ಗಂಟೆಗೇ ಪ್ರಾರಂಭ
ವಾಗಲಿದೆ. ನಾಗರಿಕರುಕಸಬಿಸಾಡುವ ಬದಲು, ಕಿಯೋಸ್ಕ್‌ಗೆ ನೀಡಲಿ’ ಎಂದು ಘನತ್ಯಾಜ್ಯ ವಿಭಾಗದ ಜಂಟಿ ಆಯುಕ್ತ ಪರಶುರಾಮ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.