ಬೆಂಗಳೂರು: ಪರಪ್ಪನ ಅಗ್ರಹಾರ ಗ್ರಾಮದ ನಿವಾಸಿಯೊಬ್ಬರು ಖರೀದಿಸಿದ್ದ ಫ್ಲ್ಯಾಟ್ ಒಂದಕ್ಕೆ ಖಾತಾ ಸಂಖ್ಯೆ ನೀಡಲು ₹ 4,000 ಲಂಚ ಪಡೆದ ಬಿಬಿಎಂಪಿ ಕೂಡ್ಲು ವಾರ್ಡ್ ಕಂದಾಯ ನಿರೀಕ್ಷಕ ಗಿರೀಶ್ ಎಂಬುವರನ್ನು ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಬುಧವಾರ ಬಂಧಿಸಿದೆ.
ಫ್ಲ್ಯಾಟ್ ಖರೀದಿದಾರರು ಖಾತೆ ಸಂಖ್ಯೆ ನೀಡುವಂತೆ ಕೋರಿ ವಾರ್ಡ್ ಸಂಖ್ಯೆ 191ರ ಕಚೇರಿಗೆ ಅರ್ಜಿ ಸಲ್ಲಿಸಿದ್ದರು. ಖಾತೆ ನೀಡಲು ₹ 4,000 ಲಂಚ ನೀಡುವಂತೆ ಕಂದಾಯ ನಿರೀಕ್ಷಕ ಬೇಡಿಕೆ ಇಟ್ಟಿದ್ದರು. ಈ ಕುರಿತು ಅರ್ಜಿದಾರರು ಎಸಿಬಿ ಬೆಂಗಳೂರು ನಗರ ಘಟಕಕ್ಕೆ ದೂರು ನೀಡಿದ್ದರು.
ಬುಧವಾರ ಅರ್ಜಿದಾರರಿಂದ ಲಂಚ ಪಡೆಯುತ್ತಿದ್ದಾಗಲೇ ದಾಳಿ ಮಾಡಿದ ಎಸಿಬಿ ಅಧಿಕಾರಿಗಳು ಗಿರೀಶ್ ಅವರನ್ನು ಬಂಧಿಸಿದ್ದಾರೆ ಎಂದು ತನಿಖಾ ಸಂಸ್ಥೆ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.