ಬೆಂಗಳೂರು: ಸಾರಿಗೆ ನೌಕರರ ಮುಷ್ಕರದಿಂದ ಬಸ್ ಸಂಚಾರ ವ್ಯತ್ಯಯವಾಗುವ ಸಾಧ್ಯತೆ ಇರುವುದರಿಂದ ಬುಧವಾರ (ಏ.7) ನಿಗದಿಯಾಗಿದ್ದ ಎಲ್ಲ ಪರೀಕ್ಷೆಗಳನ್ನು ಮುಂದೂಡಲಾಗಿದೆ ಎಂದು ಬೆಂಗಳೂರು ವಿಶ್ವವಿದ್ಯಾಲಯ ಹೇಳಿದೆ.
ಬಿಎ ಬಿಎಸ್ಸಿಯ ಐದನೇ ಸೆಮಿಸ್ಟರ್‌ನ ಪರೀಕ್ಷೆ, ಬಿಎ,ಬಿ.ಕಾಂ, ಬಿಬಿಎನ 3ನೇ ವರ್ಷದ ಪದವಿ ಪರೀಕ್ಷೆ, ಎಂ.ಕಾಂನ ಪ್ರಥಮ ವರ್ಷದ ಪರೀಕ್ಷೆ ಮತ್ತು ಸ್ನಾತಕೋತ್ತರ ಡಿಪ್ಲೊಮಾ (ಗ್ರಾಮೀಣ ಅಭಿವೃದ್ಧಿ) ಪರೀಕ್ಷೆ ನಿಗದಿಯಾಗಿತ್ತು.
ಮುಂದೂಡಲಾಗಿರುವ ಪರೀಕ್ಷೆಗಳ ದಿನಾಂಕವನ್ನು ನಂತರ ತಿಳಿಸಲಾಗುವುದು ಎಂದು ವಿಶ್ವವಿದ್ಯಾಲಯವು ಪ್ರಕಟಣೆಯಲ್ಲಿ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.