ADVERTISEMENT

ಪ್ರಾಚೀನ ಶಿಲ್ಪಗಳಲ್ಲಿ ಉಪಗ್ರಹಗಳ ಉಲ್ಲೇಖ: ಸಚಿವ ಸಿ.ಟಿ. ರವಿ

​ಪ್ರಜಾವಾಣಿ ವಾರ್ತೆ
Published 9 ಮಾರ್ಚ್ 2020, 16:04 IST
Last Updated 9 ಮಾರ್ಚ್ 2020, 16:04 IST
   

ಬೆಂಗಳೂರು: ‘ನಮ್ಮ ಪೂರ್ವಿಕರು 11,12 ಮತ್ತು 13ನೇ ಶತಮಾನಗಳಲ್ಲಿ ಕೆತ್ತಿರುವ ಕಲಾಕೃತಿಗಳಲ್ಲಿಯೇ ಉಪಗ್ರಹಗಳ ಉಲ್ಲೇಖವಿದೆ. ವೈಜ್ಞಾನಿಕವಾಗಿ, ತಾಂತ್ರಿಕವಾಗಿ ನಾವು ಎಷ್ಟು ತಿಳಿದುಕೊಂಡಿದ್ದೆವು ಎಂಬುದಕ್ಕೆ ಇದು ಸಾಕ್ಷಿ’ ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ಸಿ.ಟಿ. ರವಿ ಹೇಳಿದರು.

ನಗರದಲ್ಲಿ ಸೋಮವಾರ ಕರ್ನಾಟಕ ಶಿಲ್ಪಕಲಾ ಅಕಾಡೆಮಿಯ 2019ರ ಗೌರವ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಬೆಟ್ಟದ ಮೇಲೆ ಏಕಶಿಲೆಯಲ್ಲಿ ಕೆತ್ತಲಾದ ಶ್ರವಣಬೆಳಗೊಳದ ಗೊಮ್ಮಟೇಶ್ವರ ಮೂರ್ತಿ, ಬೇಲೂರು–ಹಳೇಬೀಡಿನಲ್ಲಿನ ಶಿಲ್ಪಗಳು ನಮ್ಮ ಕಲಾ ಶ್ರೀಮಂತಿಕೆಯ ಪ್ರತಿಬಿಂಬಗಳು’ ಎಂದರು.

‘ಸಾಮ್ರಾಜ್ಯಗಳು, ರಾಜರು, ರಾಜ ಮನೆತನಗಳು ಅಳಿದಿವೆ. ಆದರೆ, ಅವರ ಕಾಲದಲ್ಲಿನ ವಾಸ್ತುಶಿಲ್ಪಗಳಿಗೆ ಅಳಿವಿಲ್ಲ’ ಎಂದು ಅವರು ಹೇಳಿದರು.

ADVERTISEMENT

‘ಶಿಲ್ಪಕಲಾ ಅಕಾಡೆಮಿಯ ಬೆಳ್ಳಿಹಬ್ಬಕ್ಕೆ ಹೆಚ್ಚು ಅನುದಾನ ನೀಡಲಾಗುವುದು. ಬೆಳ್ಳಿಹಬ್ಬವನ್ನು ಶಿಲ್ಪಿಗಳ ಹಬ್ಬದಂತೆ, ಕಲೆಯ ಜಾತ್ರೆಯಂತೆ ಆಚರಿಸಲಾಗುವುದು’ ಎಂದು ಭರವಸೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.