ADVERTISEMENT

ಚಾತುರ್ಮಾಸ ವ್ರತ ನಾಳೆಯಿಂದ

​ಪ್ರಜಾವಾಣಿ ವಾರ್ತೆ
Published 1 ಜುಲೈ 2023, 19:00 IST
Last Updated 1 ಜುಲೈ 2023, 19:00 IST

ಬೆಂಗಳೂರು: ಮಹಾಲಕ್ಷ್ಮಿ ಲೇಔಟ್‌ನ ಚಾತುರ್ಮಾಸ ಮಹೋತ್ಸವ ಸಮಿತಿಯಿಂದ ಜುಲೈ 3ರಿಂದ ಸೆಪ್ಟೆಂಬರ್‌ 29ರವರೆಗೆ ಹರಿಹರಪುರ ಮಠದ ಶಂಕರಾಚಾರ್ಯ ಸ್ವಯಂಪ್ರಕಾಶ ಸಚ್ಚಿದಾನಂದ ಸರಸ್ವತೀ ಸ್ವಾಮೀಜಿ ಅವರ 23ನೇ ಚಾತುರ್ಮಾಸ ವ್ರತವು ಹಿಂದೂ ಸಾದರ ಕ್ಷೇಮಾಭಿವೃ‌ದ್ಧಿ ಸಂಘದಲ್ಲಿ ನಡೆಯಲಿದೆ.

ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಮಿತಿಯ ಪ್ರಧಾನ ಸಂಚಾಲಕ ಬಿ.ಎಸ್. ರಾಘವೇಂದ್ರ ಭಟ್, ‘ಇದೇ 3ರಿಂದ ವ್ಯಾಸಪೂಜೆ, ಉತ್ತರ ಪೂಜಾ ವ್ಯಾಸಾಕ್ಷತೆ ಕಾರ್ಯಕ್ರಮಗಳು ನಡೆಯಲಿವೆ. ಈ ಚಾತುರ್ಮಾಸದ 90 ದಿನಗಳ ಕಾಲಾವಧಿಯಲ್ಲಿ ಪ್ರತಿನಿತ್ಯ ಅನ್ನಸಂತರ್ಪಣೆ, ವಿಶೇಷ ಪೂಜೆ, ಭಜನೆ, ಸತ್ಸಂಗ ಜರುಗಲಿವೆ. ಶ್ರೀಲಕ್ಷ್ಮಿನರಸಿಂಹ ಸ್ವಾಮಿಯ ಕಲ್ಯಾಣೋತ್ಸವ ಸೇವೆಯು ಪ್ರತಿದಿನ ಇರಲಿದೆ’ ಎಂದು ತಿಳಿಸಿದರು.

‘ದೇಶದಲ್ಲಿ ಯಾವುದೇ ಅತಿವೃಷ್ಟಿ, ಅನಾವೃಷ್ಟಿಯಾಗದಂತೆ ಲೋಕಕಲ್ಯಾಣಾರ್ಥವಾಗಿ ಶಿವ ಪಂಚಾಕ್ಷರಿ ಕೋಟಿ ಜಪ ಮಹಾಯಜ್ಞವನ್ನು ಹಮ್ಮಿಕೊಳ್ಳಲಾಗಿದೆ. ಈ ಜಪವನ್ನು ಸಚ್ಚಿದಾನಂದ ಸರಸ್ವತೀ ಸ್ವಾಮೀಜಿ ಅವರ ಸಾನ್ನಿಧ್ಯದಲ್ಲಿ ಜುಲೈ 3ರಂದು ಪ್ರಾರಂಭಿಸಲಾಗುವುದು. ಈ ಯಜ್ಞದಲ್ಲಿ ಯಾವುದೇ ಜಾತಿ, ಮತ ಮತ್ತು ಲಿಂಗ ಭೇದವಿಲ್ಲದೇ ಪ್ರತಿಯೊಬ್ಬರೂ ಪಾಲ್ಗೊಳ್ಳಬಹುದು’ ಎಂದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.