
ಕ್ಯಾಬ್
ಬೆಂಗಳೂರು: ಮದ್ಯದ ಅಮಲಿನಲ್ಲಿ ಅಪಘಾತ ಮಾಡಿ, ಕ್ಯಾಬ್ ಚಾಲಕನ ಮೇಲೆ ಇಬ್ಬರು ಯುವತಿಯರು ಹಲ್ಲೆ ನಡೆಸಿದ್ದಾರೆ.
ಯುವತಿಯರು ಜೆ.ಪಿ.ನಗರ ಹಾಗೂ ಕೋರಮಂಗಲದಲ್ಲಿ ವಾಸವಾಗಿದ್ದಾರೆ. ಕ್ಯಾಬ್ ಚಾಲಕನ ಜತೆ ಗಲಾಟೆ ಮಾಡಿಕೊಂಡು, ರಂಪಾಟ ಮಾಡುತ್ತಿರುವ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಹುಳಿಮಾವು ಪೊಲೀಸ್ ಠಾಣೆ ವ್ಯಾಪ್ತಿಯ ಬನ್ನೇರುಘಟ್ಟ ರಸ್ತೆಯ ಖಾಸಗಿ ಹೋಟೆಲ್‌ಗೆ ಸ್ನೇಹಿತರೊಂದಿಗೆ ಬಂದಿದ್ದ ಉತ್ತರ ಭಾರತದ ಲೀಸಾ ಹಾಗೂ ಮ್ಯಾಥ್ಯೂ ಅವರು ತಮ್ಮ ದ್ವಿಚಕ್ರ ವಾಹನವನ್ನು ಕ್ಯಾಬ್‌ಗೆ ಡಿಕ್ಕಿ ಹೊಡೆಸಿದ್ದಾರೆ. ಇದನ್ನು ಪ್ರಶ್ನಿಸಿದ್ದ ಚಾಲಕ ಅಹ್ಮದ್ ಜತೆ ವಾಗ್ವಾದಕ್ಕೆ ಇಳಿದಿದ್ದಾರೆ. ಈ ವೇಳೆ ಬುದ್ಧಿ ಹೇಳಲು ಬಂದ ಸ್ಥಳೀಯರ ಜತೆಗೂ ಗಲಾಟೆ ಮಾಡಿಕೊಂಡಿದ್ದಾರೆ.
ಸ್ಥಳಕ್ಕೆ ಹುಳಿಮಾವು ಠಾಣೆ ಪೊಲೀಸರು ಭೇಟಿ ನೀಡಿ ಯುವತಿಯರನ್ನು ನಿಯಂತ್ರಿಸಿದ್ದಾರೆ. ಇಬ್ಬರನ್ನೂ ಠಾಣೆಗೆ ಕರೆದೊಯ್ದ ಪೊಲೀಸರು, ಹೇಳಿಕೆ ದಾಖಲಿಸಿಕೊಂಡು, ಬುದ್ಧಿವಾದ ಹೇಳಿ ಕಳುಹಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.