ADVERTISEMENT

ಕನಕದಾಸ ಅಧ್ಯಯನ ಕೇಂದ್ರ: ಕಿರು ಅಧ್ಯಯನ ಫೆಲೋಶಿಪ್‌ಗೆ ಅರ್ಜಿ ಆಹ್ವಾನ

​ಪ್ರಜಾವಾಣಿ ವಾರ್ತೆ
Published 7 ಮೇ 2025, 14:41 IST
Last Updated 7 ಮೇ 2025, 14:41 IST
<div class="paragraphs"><p>ಅರ್ಜಿ ಆಹ್ವಾನ</p></div>

ಅರ್ಜಿ ಆಹ್ವಾನ

   

ಬೆಂಗಳೂರು: ಸಂತಕವಿ ಕನಕದಾಸ ಮತ್ತು ತತ್ವಪದಕಾರರ ಅಧ್ಯಯನ ಕೇಂದ್ರವು ಕಿರು ಅಧ್ಯಯನ ನಡೆಸಲು ತಲಾ ₹1.5 ಲಕ್ಷಗಳ ಫೆಲೋಶಿಪ್‌ಗಳನ್ನು ನೀಡುತ್ತಿದ್ದು, ಆಸಕ್ತರಿಂದ ಅರ್ಜಿ ಆಹ್ವಾನಿಸಿದೆ.

‘ಕನಕದಾಸರ ಮುಂಡಿಗೆ ಸಾಹಿತ್ಯ–ತಾತ್ವಿಕ ಚಿಂತನೆ’, ‘ಕರ್ನಾಟಕ ತತ್ವಪದಗಳ ಚಾರಿತ್ರಿಕ ಅಧ್ಯಯನ’, ‘ಕನ್ನಡದಲ್ಲಿ ಅನುಭಾವ ಸಾಹಿತ್ಯ –ತಾತ್ವಿಕ ಅಧ್ಯಯನ’, ‘ಕನ್ನಡದಲ್ಲಿ ಕೀರ್ತನ ಸಾಹಿತ್ಯದ ಸಮಾಜೋ–ಸಾಂಸ್ಕೃತಿಕ ಅಧ್ಯಯನ’ ಇವುಗಳಲ್ಲಿ ಯಾವುದಾದರೂ ಒಂದು ವಿಷಯದ ಬಗ್ಗೆ ಅಧ್ಯಯನ ನಡೆಸಬೇಕು.

ADVERTISEMENT

12 ತಿಂಗಳ ಅವಧಿಯ ಈ ಅಧ್ಯಯನ ಯೋಜನೆಯ ಬಗ್ಗೆ ಆಸಕ್ತ ಯುವ ಸಂಶೋಧನಾರ್ಥಿಗಳು ವಿದ್ಯಾರ್ಹತೆ, ಸಂಶೋಧನೆಯ ಬಗೆಗಿನ ಅನುಭವ, ಆಸಕ್ತಿ ಕ್ಷೇತ್ರಗಳನ್ನು ಒಳಗೊಂಡ ವಿವರಗಳನ್ನು ಸಲ್ಲಿಸಬೇಕು. ಆಯ್ಕೆ ಮಾಡಿಕೊಂಡ ವಿಷಯದ ಅಧ್ಯಯನ ವ್ಯಾಪ್ತಿ, ಆಕರ ಸಾಮಗ್ರಿಗಳನ್ನು ಒಳಗೊಂಡ ಸಂಕ್ಷಿಪ್ತ ಮಾಹಿತಿಯಿರುವ ಸಾರಲೇಖವನ್ನು ಅರ್ಜಿಯೊಂದಿಗೆ ಲಗತ್ತಿಸಬೇಕು. ಆಸಕ್ತಿ ಇರುವ 20ರಿಂದ 55 ವರ್ಷದೊಳಗಿನವರು ಮೇ 20ರ ಒಳಗೆ ಅಧ್ಯಯನ ಕೇಂದ್ರಕ್ಕೆ ಇ ಮೇಲ್‌ ಅಥವಾ ಅಂಚೆ ಮೂಲಕ ಕಳುಹಿಸಬಹುದು ಎಂದು ಅಧ್ಯಯನ ಕೇಂದ್ರದ ಅಧ್ಯಕ್ಷ ಕಾ.ತ. ಚಿಕ್ಕಣ್ಣ ತಿಳಿಸಿದ್ದಾರೆ.

ಮಾಹಿತಿಗಾಗಿ ದೂರವಾಣಿ 080 22113147 ಹಾಗೂ 6364529319 ಸಂಪರ್ಕಿಸಬಹುದು.  ವೆಬ್‌ಸೈಟ್‌: kanakadasaresearchcentre.karnataka.gov.in ಇಲ್ಲಿ ಅರ್ಜಿ ನಮೂನೆ ಹಾಗೂ ವಿವರಗಳನ್ನು ಪಡೆದುಕೊಳ್ಳಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.