ADVERTISEMENT

ಕೆನರಾ ಉತ್ಸವಕ್ಕೆ ನಾಳೆ ತೆರೆ

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2019, 19:00 IST
Last Updated 21 ಫೆಬ್ರುವರಿ 2019, 19:00 IST
ಬ್ಯಾಂಕಿನ ಕಾರ್ಯನಿರ್ವಾಹಕ ನಿರ್ದೇಶಕಿ ಎ.ಮಣಿಮೇಖಲೆ ಮೇಳವನ್ನು ಉದ್ಘಾಟಿಸಿದರು.
ಬ್ಯಾಂಕಿನ ಕಾರ್ಯನಿರ್ವಾಹಕ ನಿರ್ದೇಶಕಿ ಎ.ಮಣಿಮೇಖಲೆ ಮೇಳವನ್ನು ಉದ್ಘಾಟಿಸಿದರು.   

ಬೆಂಗಳೂರು: ಕೆನರಾ ರಿಲೀಫ್‌ ಆ್ಯಂಡ್‌ ವೆಲ್‌ಫೇರ್‌ ಸೊಸೈಟಿ ಸಹಯೋಗದೊಂದಿಗೆಕೆನರಾ ಬ್ಯಾಂಕ್‌ ಕೇಂದ್ರ ಕಚೇರಿಯ ಮಹಿಳಾ ಸಬಲೀಕರಣ ವಿಭಾಗ ಬನಶಂಕರಿ 2ನೇ ಹಂತದ ಮಾತೃಛಾಯ ಆವರಣದಲ್ಲಿ ಕರಕುಶಲ ವಸ್ತುಗಳ ಮೇಳ ‘ಕೆನರಾ ಉತ್ಸವ’ವನ್ನು ಆಯೋಜಿಸಿದೆ.

ಬ್ಯಾಂಕಿನ ಕಾರ್ಯನಿರ್ವಾಹಕ ನಿರ್ದೇಶಕಿ ಎ.ಮಣಿಮೇಖಲೆಮೇಳವನ್ನುಉದ್ಘಾಟಿಸಿದರು. ಬಳಿಕ ಕರಕುಶಲ ಮಳಿಗೆಗಳಿಗೆ ಭೇಟಿ ನೀಡಿ, ಮಹಿಳೆಯರ ಕೌಶಲಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ಮಹಿಳಾ ಉದ್ಯಮಿಗಳಿಗೆ ಕೆನರಾ ಬ್ಯಾಂಕ್‌ ಸಹಾಯಹಸ್ತ ಚಾಚಲಿದೆ ಎಂದು ಅಭಯ ನೀಡಿದರು.

ಈ ಮೇಳ ಶನಿವಾರದವರೆಗೂ ನಡೆಯಲಿದ್ದು, ಕೆನರಾ ಬ್ಯಾಂಕ್‌ ಪ್ರಾಯೋಜಕತ್ವದಆರ್ಟಿಸನ್‌ ಟ್ರೈನಿಂಗ್‌ ಇನ್‌ಸ್ಟಿಟ್ಯೂಟ್‌ ತಯಾರಿಸಿದಸಿದ್ಧ ಉಡುಪು, ಆಭರಣ, ಕರಕುಶಲ ವಸ್ತು, ಆಹಾರ ಉತ್ಪನ್ನ, ಕೆತ್ತನೆ ಮತ್ತುಮಣ್ಣಿನ ಕಲಾಕೃತಿಗಳನ್ನು ಪ್ರದರ್ಶನಕ್ಕೆ ಇಡಲಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.