
ಸಾವು
(ಪ್ರಾತಿನಿಧಿಕ ಚಿತ್ರ)
ಯಲಹಂಕ: ತಡವಾಗಿ ಕ್ಯಾನ್ಸರ್ ರೋಗ ಪತ್ತೆಯಾಗುವುದು ಹಾಗೂ ಒಂದೇ ಕೇಂದ್ರದಲ್ಲಿ ಸಮಗ್ರ ಚಿಕಿತ್ಸೆ ಲಭ್ಯವಿಲ್ಲದಿರುವುದೇ ಕ್ಯಾನ್ಸರ್ ರೋಗಿಗಳ ಹೆಚ್ಚಿನ ಮರಣಕ್ಕೆ ಪ್ರಮುಖ ಕಾರಣಗಳಾಗಿವೆ ಎಂದು ಮೆಡಿಕಲ್ ಆಂಕಾಲಜಿ ಲೀಡ್ ಕನ್ಸಲ್ಟೆಂಟ್ ಡಾ.ಪ್ರಸಾದ್ ನಾರಾಯಣನ್ ಹೇಳಿದರು.
ಯಲಹಂಕದಲ್ಲಿ ಆರಂಭಗೊಂಡಿರುವ ಮಣಿಪಾಲ್ ಆಸ್ಪತ್ರೆಯಲ್ಲಿ ಅಳವಡಿಸಿರುವ ಅತ್ಯಾಧುನಿಕ ವೈದ್ಯಕೀಯ ತಂತ್ರಜ್ಞಾನ ಕುರಿತ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಇಂದಿನ ಕ್ಯಾನ್ಸರ್ ಚಿಕಿತ್ಸೆ ರೋಗಕ್ಕೆ ಮಾತ್ರ ಸೀಮಿತವಾಗದೆ, ರೋಗಿಯ ಅಗತ್ಯಕ್ಕೆ ಅನುಗುಣವಾಗಿ ರೂಪುಗೊಳ್ಳುತ್ತಿದೆ. ಪ್ರಿಸಿಷನ್ ಆಂಕಾಲಜಿ, ಇಮ್ಯುನೋಥೆರಪಿ ಹಾಗೂ ಸುಧಾರಿತ ಚಿಕಿತ್ಸಾ ಮಾರ್ಗಸೂಚಿಗಳು ರಿಮಿಷನ್ ಪ್ರಮಾಣ ಮತ್ತು ದೀರ್ಘಕಾಲಿಕ ಬದುಕನ್ನು ಗಮನಾರ್ಹವಾಗಿ ಹೆಚ್ಚಿಸಿವೆ. ಇದರಿಂದ ರೋಗಿಗಳಲ್ಲಿ ಹೊಸ ನಿರೀಕ್ಷೆ ಮೂಡುತ್ತಿದೆ’ ಎಂದರು.
ಮೆಡಿಕಲ್ ಆಂಕಾಲಜಿ ಕನ್ಸಲ್ಟೆಂಟ್ ಡಾ.ಹರೀಶ್.ಪಿ ಮಾತನಾಡಿ, ‘ರೋಗನಿರ್ಣಯದಿಂದ ಹಿಡಿದು ಬದುಕಿನ ಮುಂದಿನ ಹಂತದವರೆಗೆ ವೈದ್ಯಕೀಯ ತಂಡವು ರೋಗಿಯೊಂದಿಗೆ ಜೊತೆಯಾಗಿ ನಡೆಯುತ್ತದೆ. ಇದರಿಂದ ಚಿಕಿತ್ಸೆಯ ಪಯಣ ಸುಲಭವಾಗುತ್ತದೆ’ ಎಂದರು.
ಕ್ಯಾನ್ಸರ್ ತಜ್ಞರಾದ ಡಾ.ಜಗನ್ನಾಥ್ ದೀಕ್ಷಿತ್, ಡಾ.ಏರನ್ ಫರ್ನಾಂಡಿಸ್, ಡಾ.ಜೋಸೆಫ್ ಮ್ಯಾಥ್ಯೂ, ಡಾ.ವಿಕ್ರಮ್ ಮೈಯ್ಯ, ಡಾ.ರಾಮ್ ಮೋಹನ್ ರೆಡ್ಡಿ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.