ADVERTISEMENT

₹ 10 ಲಕ್ಷ ಮೌಲ್ಯದ ಚಿನ್ನಾಭರಣ ಕಳವು: ಕೇರ್‌ ಟೇಕರ್‌ ಬಂಧನ

​ಪ್ರಜಾವಾಣಿ ವಾರ್ತೆ
Published 8 ಮಾರ್ಚ್ 2023, 20:52 IST
Last Updated 8 ಮಾರ್ಚ್ 2023, 20:52 IST
ಆರೋಪಿಯಿಂದ ವಶಕ್ಕೆ ಪಡೆದ ಚಿನ್ನಾಭರಣ
ಆರೋಪಿಯಿಂದ ವಶಕ್ಕೆ ಪಡೆದ ಚಿನ್ನಾಭರಣ   

ಬೆಂಗಳೂರು: ರಾಜರಾಜೇಶ್ವರಿ ನಗರ ಪೊಲೀಸ್‌ ಠಾಣೆ ವ್ಯಾಪ್ತಿಯ ಮನೆಯೊಂದರಲ್ಲಿ ಚಿನ್ನಾಭರಣ ಕಳವು ಮಾಡಿದ್ದ ಕೇರ್‌ ಟೇಕರ್‌ ಅನ್ನು ಪೊಲೀಸರು ಬಂಧಿಸಿದ್ದಾರೆ.

ಹಾವೇರಿ ಜಿಲ್ಲೆ ಸವಣೂರು ತಾಲ್ಲೂಕಿನ ಮನ್ನೂರು ಗ್ರಾಮದ ದ್ಯಾಮಪ್ಪ ತಿಮಣ್ಣ ವಡ್ಡರ (34) ಬಂಧಿತ ಆರೋಪಿ.

ಆರೋಪಿಯನ್ನು ಉತ್ತರ ಕನ್ನಡ ಜಿಲ್ಲೆ ಕಾರವಾರದ ಕೂಸೂರು ಗ್ರಾಮದಲ್ಲಿ ಬಂಧಿಸಲಾಯಿತು ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ADVERTISEMENT

‘ಆರೋಪಿಯಿಂದ 4 ಚಿನ್ನದ ಬಳೆ, ಮುತ್ತಿನ ಡಾಲರ್‌, ಚಿನ್ನದ ಹಾರ ಸೇರಿದಂತೆ ವಜ್ರದ ಆಭರಣಗಳನ್ನು ವಶಕ್ಕೆ ಪಡೆಯಲಾಗಿದೆ’ ಎಂದು ಮೂಲಗಳು ಹೇಳಿವೆ.

‘ರಾಜರಾಜೇಶ್ವರಿ ನಗರದ 17ನೇ ಕ್ರಾಸ್‌ನ ಅರ್ಚಿತ ಡೆಫ್ಯೂಡ್ಯೂಯಲ್‌ ಅಪಾರ್ಟ್‌ಮೆಂಟ್‌ನ ಐಡಿಯಲ್‌ ಹೋಮ್‌ನ ಪಿ.ಎನ್‌.ಕುಲಕರ್ಣಿ ಎಂಬುವವರು ಮನೆಯಲ್ಲಿ ದ್ಯಾಮಪ್ಪ ಕೇರ್‌ ಟೇಕರ್ ಆಗಿ ಕೆಲಸಕ್ಕೆ ಸೇರಿ ಮೂರನೇ ದಿನವೇ ಮನೆಯಲ್ಲಿ ಯಾರೂ ಇಲ್ಲದಿರುವಾಗ ಚಿನ್ನಾಭರಣ ಕಳವು ಮಾಡಿ ಪರಾರಿಯಾಗಿದ್ದ’ ಎಂದು ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.