ADVERTISEMENT

ಸಿಬಿಐ, ಇಡಿ ದುರ್ಬಳಕೆ: ದೇವೇಗೌಡ

​ಪ್ರಜಾವಾಣಿ ವಾರ್ತೆ
Published 29 ಸೆಪ್ಟೆಂಬರ್ 2019, 19:18 IST
Last Updated 29 ಸೆಪ್ಟೆಂಬರ್ 2019, 19:18 IST
ಎಚ್.ಡಿ.ದೇವೇಗೌಡ ಮಾತನಾಡಿದರು. ಪಕ್ಷದ ಯಶವಂತಪುರ ಕ್ಷೇತ್ರ ಘಟಕದ ಅಧ್ಯಕ್ಷ ಟಿ.ಎನ್.ಜವರಾಯಿಗೌಡ, ಮುಖಂಡರಾದ ಜಫ್ರುಲ್ಲಾಖಾನ್, ದೊಡ್ಮನೆ ವೆಂಕಟೇಶ್ ಇದ್ದಾರೆ.
ಎಚ್.ಡಿ.ದೇವೇಗೌಡ ಮಾತನಾಡಿದರು. ಪಕ್ಷದ ಯಶವಂತಪುರ ಕ್ಷೇತ್ರ ಘಟಕದ ಅಧ್ಯಕ್ಷ ಟಿ.ಎನ್.ಜವರಾಯಿಗೌಡ, ಮುಖಂಡರಾದ ಜಫ್ರುಲ್ಲಾಖಾನ್, ದೊಡ್ಮನೆ ವೆಂಕಟೇಶ್ ಇದ್ದಾರೆ.   

ರಾಜರಾಜೇಶ್ವರಿನಗರ: ‘ರಾಜ್ಯದಲ್ಲಿ ಮಧ್ಯಂತರ ಚುನಾವಣೆ ಎದುರಾಗುವ ಸಾಧ್ಯತೆ ಹೆಚ್ಚಾಗಿದ್ದು, ಕಾರ್ಯಕರ್ತರು ಪಕ್ಷ ಸಂಘಟಿಸಿ ಮತ್ತೊಮ್ಮೆ ಪಕ್ಷವನ್ನು ಅಧಿಕಾರಕ್ಕೆ ತರಲು ಶ್ರಮಿಸ ಬೇಕು’ ಎಂದು ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡ ಹೇಳಿದರು.

ಸೀಗೇಹಳ್ಳಿಯಲ್ಲಿ ಹಮ್ಮಿಕೊಂಡಿದ್ದ ಯಶವಂತಪುರ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಕಾರ್ಯಕರ್ತರ ಸಭೆ ಉದ್ಘಾಟಿಸಿ ಮಾತನಾಡಿದರು. ‘ಬೆವರು ಹರಿಸಿ ಅವಿರತವಾಗಿ ದುಡಿಯುವ ಕಾರ್ಯಕರ್ತರಿಂದ ಪಕ್ಷ ಉಳಿದಿದೆ. ಯಾವುದೇ ನಾಯಕರಿಂದಲ್ಲ’ ಎಂದರು.

‘ಸಿಬಿಐ, ಇ.ಡಿ ಮತ್ತಿತರ ಸಂಸ್ಥೆಗಳನ್ನು ಕೈಗೊಂಬೆ ಮಾಡಿಕೊಂಡು ಬಿಜೆಪಿಯವರು ಚುನಾವಣೆ ಮುಂದೂ ಡಿದ್ದಾರೆ. ರಾಜಕೀಯ ಸೇಡಿನಿಂದ ಹಲವು ನಾಯಕರನ್ನು ಹೆದರಿಸಿ ಬೆದರಿಸಲಾಗುತ್ತಿದೆ. ರಾಷ್ಟ್ರ ಮತ್ತು ರಾಜ್ಯದಲ್ಲಿ ಬಿಜೆಪಿ ನಾಯಕರು ಹಲವು ಹಗರಣಗಳನ್ನು ಮಾಡುತ್ತಿದ್ದರೂ ಕೇಂದ್ರ ನಾಯಕರು ಕಣ್ಣು ಮುಚ್ಚಿ ಕುಳಿತಿದ್ದಾರೆ’ ಎಂದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.