ADVERTISEMENT

ಅಪರಾಧ ಪ್ರಕರಣ ಖುಲಾಸೆ; ಶಿಸ್ತುಕ್ರಮದ ವರದಿಗೆ ಸೂಚನೆ

ಡಿಸಿಪಿಗಳಿಗೆ ಪತ್ರ ಬರೆದ ಸಿಸಿಬಿ ಜಂಟಿ ಕಮಿಷನರ್

​ಪ್ರಜಾವಾಣಿ ವಾರ್ತೆ
Published 12 ನವೆಂಬರ್ 2019, 21:58 IST
Last Updated 12 ನವೆಂಬರ್ 2019, 21:58 IST

ಬೆಂಗಳೂರು: ಪೊಲೀಸರ ಲೋಪದಿಂದ ಖುಲಾಸೆಗೊಂಡಿರುವ ಪ್ರಕರಣಗಳ ವಿವರ ಹಾಗೂ ಅಂಥ ತನಿಖಾಧಿಕಾರಿ ವಿರುದ್ಧ ಕೈಗೊಂಡಿರುವ ಶಿಸ್ತುಕ್ರಮದ ಬಗ್ಗೆ ವರದಿ ನೀಡುವಂತೆ ಸಿಸಿಬಿ ಜಂಟಿ ಕಮಿಷನರ್ ಸಂದೀಪ್ ಪಾಟೀಲ ಅವರು ನಗರದ ಎಲ್ಲ ವಿಭಾಗಗಳ ಡಿಸಿಪಿಗಳಿಗೆ ಪತ್ರ ಬರೆದಿದ್ದಾರೆ.

‘ಈಗಾಗಲೇ ಕಳುಹಿಸಿರುವ ನಮೂನೆಯಲ್ಲಿ ವರದಿ ಸಿದ್ಧಪಡಿಸಿ ಕಳುಹಿಸಬೇಕು. ಅದೇ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಬೇಕಿದೆ’ ಎಂದು ಪತ್ರದಲ್ಲಿ ಹೇಳಲಾಗಿದೆ.

‘ಸಾಕ್ಷಿದಾರರನ್ನು ಹಾಗೂ ಆರೋಪಿಗಳಿಂದ ಜಪ್ತಿ ಮಾಡಲಾದ ವಸ್ತುಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸದೆ, ಪ್ರಕರಣದ ವಿಚಾರಣೆಗೆ ನ್ಯಾಯಾಲಯಕ್ಕೆ ಹಾಜರಾಗದೆ ಹಲವು ತನಿಖಾಧಿಕಾರಿಗಳು ಲೋಪ ಎಸಗಿದ್ದಾರೆ. ಅದರಿಂದಲೇ ಪ್ರಕರಣಗಳು ಖುಲಾಸೆಗೊಂಡಿವೆ. ಇಂಥ ಲೋಪವನ್ನು ಗಂಭೀರವಾಗಿ ಪರಿಗಣಿಸಿ ವಿಚಾರಣೆಗೆ ಸಮಿತಿಯೊಂದನ್ನು ರಚಿಸಲಾಗಿದೆ.’

ADVERTISEMENT

‘2015ರಿಂದ 2019ರವರೆಗಿನ ಖುಲಾಸೆ ಪ್ರಕರಣಗಳಲ್ಲಿ ಕರ್ತವ್ಯ ಲೋಪವೆಸಗಿದ ಅಧಿಕಾರಿ ಹಾಗೂ ಸಿಬ್ಬಂದಿ ವಿರುದ್ಧ ಕೈಗೊಂಡಿರುವ ಶಿಸ್ತುಕ್ರಮದ ವಿವರ ವರದಿಯಲ್ಲಿ ಇರಬೇಕು’ ಎಂದು ಪತ್ರದಲ್ಲಿಸಂದೀಪ್ ಪಾಟೀಲ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.