ADVERTISEMENT

ಬೆಂಗಳೂರು | ಬೈಕ್‌ನಲ್ಲಿ ಬಂದು ಚಿನ್ನದ ಸರ ಕಿತ್ತೊಯ್ದರು

​ಪ್ರಜಾವಾಣಿ ವಾರ್ತೆ
Published 12 ನವೆಂಬರ್ 2023, 18:29 IST
Last Updated 12 ನವೆಂಬರ್ 2023, 18:29 IST
<div class="paragraphs"><p>ಸರ ಕಳ್ಳತನ (ಸಾಂದರ್ಭಿಕ  ಚಿತ್ರ)</p></div>

ಸರ ಕಳ್ಳತನ (ಸಾಂದರ್ಭಿಕ ಚಿತ್ರ)

   

ಬೆಂಗಳೂರು: ಜ್ಞಾನಭಾರತಿ ಠಾಣೆ ವ್ಯಾಪ್ತಿಯಲ್ಲಿ ಮಹಿಳೆಯೊಬ್ಬರನ್ನು ಹಿಂಬಾಲಿಸಿ ಚಿನ್ನದ ಸರ ಕಿತ್ತೊಯ್ಯಲಾಗಿದ್ದು, ಈ ಸಂಬಂಧ ಎಫ್‌ಐಆರ್ ದಾಖಲಾಗಿದೆ.

‘ಸ್ಥಳೀಯ ನಿವಾಸಿ 30 ವರ್ಷದ ಮಹಿಳೆ ದೂರು ನೀಡಿದ್ದಾರೆ. ಇಬ್ಬರು ಅಪರಿಚಿತರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.

ADVERTISEMENT

ಮಹಿಳೆ ಉಲ್ಲಾಳ ಮುಖ್ಯರಸ್ತೆಯ ಮಂಗನಹಳ್ಳಿ ವೃತ್ತದ ಅಯ್ಯಪ್ಪ ಸ್ವಾಮಿ ದೇವಸ್ಥಾನ ರಸ್ತೆಯಲ್ಲಿ ನ. 9ರಂದು ರಾತ್ರಿ 8.35ರ ಸುಮಾರಿಗೆ ನಡೆದುಕೊಂಡು ಹೊರಟಿದ್ದಾಗ ಕೃತ್ಯ ನಡೆದಿದೆ. 

‘ಬೈಕ್‌ನ ಹಿಂಬದಿಯಲ್ಲಿ ಕುಳಿತಿದ್ದ ಆರೋಪಿ ಮಹಿಳೆ ಧರಿಸಿದ್ದ 70 ಗ್ರಾಂ ತೂಕದ ಚಿನ್ನದ ಸರ ಎಳೆದಿದ್ದು, ಸರ ತುಂಡಾಗಿತ್ತು. 48 ಗ್ರಾಂ ತೂಕದ ಅರ್ಧ ಸರದ ಸಮೇತ ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.