ಬೆಂಗಳೂರು: ಕೇಂದ್ರೀಯ ಮಾಧ್ಯಮಿಕ ಶಿಕ್ಷಣ ಮಂಡಳಿಯ (ಸಿಬಿಎಸ್‌ಇ) 10 ಮತ್ತು 12ನೇ ತರಗತಿಯ ಪರೀಕ್ಷೆಯಲ್ಲಿ ಶ್ರೀ ಚೈತನ್ಯ ಶಿಕ್ಷಣ ಸಂಸ್ಥೆಯ ಇಲ್ಲಿನ ಶ್ರೀ ಚೈತನ್ಯ ಟೆಕ್ನೊ ಸ್ಕೂಲ್‌ನಲ್ಲಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದಾರೆ.
10ನೇ ತರಗತಿಯಲ್ಲಿ ಹರ್ಷಿತ್ ರೆಡ್ಡಿ ವಿ., ಡಿ.ಜೆ. ಚರಣ್ ಹಾಗೂ ಸನ್ಯಮ್ ಲಾಲ್ವಾನಿ 495 ಅಂಕಗಳನ್ನು ಪಡೆದಿದ್ದಾರೆ. 20 ವಿದ್ಯಾರ್ಥಿಗಳು 490 ಹಾಗೂ ಅದಕ್ಕಿಂತ ಹೆಚ್ಚಿನ ಅಂಕ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. 12ನೇ ತರಗತಿಯಲ್ಲಿ ನರೇನ್ ಎಂ. 496 ಅಂಕ ಗಳಿಸಿದರೆ, ದಿನೇಶ್ ಗೋಮತಿ, ನಿಹಾಲ್ ಸಾಗರ್ ವಿಷ್ಣು, ಸಾಯಿಶ್ರೀ ತಳೂರಿ ತಲಾ 494 ಅಂಕಗಳನ್ನು ಪಡೆದಿದ್ದಾರೆ. 12 ವಿದ್ಯಾರ್ಥಿಗಳು 490 ಹಾಗೂ ಅದಕ್ಕಿಂತ ಹೆಚ್ಚಿನ ಅಂಕ ಗಳಿಸಿದ್ದಾರೆ.
ವಿದ್ಯಾರ್ಥಿಗಳ ಈ ಸಾಧನೆಗೆ ಪೋಷಕರು, ಶಿಕ್ಷಣ ಸಂಸ್ಥೆಯ ಸಿಬ್ಬಂದಿ ಮತ್ತು ಆಡಳಿತ ಮಂಡಳಿ ಸದಸ್ಯರು ಸಂತಸ ವ್ಯಕ್ತಪಡಿಸಿದ್ದಾರೆ. ಶ್ರೀ ಚೈತನ್ಯ ಶೈಕ್ಷಣಿಕ ಸಂಸ್ಥೆಗಳ ನಿರ್ದೇಶಕಿ ಸುಷ್ಮಾ ಬೊಪ್ಪಣ ಅವರು ಸಿಬಿಎಸ್‌ಇ 10ನೇ ತರಗತಿ ಹಾಗೂ 12ನೇ ತರಗತಿ ಪರೀಕ್ಷೆಯಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಅಭಿನಂದಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.