ಪೀಣ್ಯ ದಾಸರಹಳ್ಳಿ: ಕನ್ನಡ ವಿವೇಕವನ್ನು, ಐಸಿರಿಯನ್ನು ಹೆಚ್ಚಿಸುವ ಪಸರಿಸುವ ಕೆಲಸವನ್ನು ಕರ್ನಾಟಕ ಸಾಹಿತ್ಯ ಅಕಾಡೆಮಿಯ ‘ಚಕೋರ’ ಸಾಹಿತ್ಯ, ಸಂಗೀತ ಕಾರ್ಯಕ್ರಮಗಳು ಮಾಡುತ್ತಿವೆ ಎಂದು ಕನ್ನಡ ಜಾನಪದ ಪರಿಷತ್ತಿನ ದಾಸರಹಳ್ಳಿ ಕ್ಷೇತ್ರ ಘಟಕದ ಅಧ್ಯಕ್ಷ ವೈ.ಬಿ.ಎಚ್. ಜಯದೇವ್ ತಿಳಿಸಿದರು.
ಹಾವನೂರು ಬಡಾವಣೆಯಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಮತ್ತು ಭೂಮಿಕಾ ಸೇವಾ ಫೌಂಡೇಷನ್ ಸಹಯೋಗದಲ್ಲಿ ನಡೆದ ‘ಚಕೋರ: ಕವಿತಾ ಗಾಯನ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಗ್ರಾಮಾಂತರ ಮಟ್ಟದಲ್ಲಿ ‘ಚಕೋರ’ ಕಾರ್ಯಕ್ರಮಗಳು ಸೃಜನಾತ್ಮಕವಾಗಿ, ರಚನಾತ್ಮಕವಾಗಿ ಯಶಸ್ವಿಯಾಗುತ್ತಿವೆ. ಹೊಸ ಪ್ರತಿಭೆಗಳು ಬೆಳಕಿಗೆ ಬರಲು ವೇದಿಕೆಯಾಗುತ್ತಿದೆ ಎಂದರು.
ಫೌಂಡೇಷನ್ ಅಧ್ಯಕ್ಷೆ ಲತಾ ಕುಂದರಗಿ ಮಾತನಾಡಿ, ‘ಕನ್ನಡ ಭಾಷೆ ಮತ್ತು ಗಾಯನಗಳು ಎಲ್ಲರ ಮನ ತಲುಪಬೇಕು. ಕಲುಷಿತ ಮನಸ್ಸುಗಳು ದೂರವಾಗಬೇಕು’ ಎಂದು ಆಶಿಸಿದರು.
ಜನಪದ ಗಾಯಕ ಕುಣಿಗಲ್ ರಾಮಚಂದ್ರ, ಶ್ರೀದೇವಿ ಹಾಗೂ ಗಾಯಕಿ ಕವಿತಾ ಅವರು ಕುವೆಂಪು, ಜಿ.ಎಸ್.ಶಿವರುದ್ರಪ್ಪ, ದ.ರಾ.ಬೇಂದ್ರೆ, ಕಾ.ವೆಂ. ಶ್ರೀನಿವಾಸಮೂರ್ತಿ, ಎಲ್.ಎನ್. ಮುಕುಂದರಾಜ್, ಲಕ್ಷೀ ಶ್ರೀನಿವಾಸ, ಟಿ. ಪಿ.ಕೈಲಾಸಂ ಅವರ ಗೀತೆಗಳನ್ನು ಪ್ರಸ್ತುತಪಡಿಸಿದರು. ‘ಸುಧಾ’ ವಾರ ಪತ್ರಿಕೆಯ ಕಾರ್ಯನಿರ್ವಾಹಕ ಸಂಪಾದಕ ರಘುನಾಥ ಚ.ಹ., ಬೆಂಗಳೂರು ವಿಶ್ವವಿದ್ಯಾಲಯ ನಿವೃತ್ತ ಸಹಾಯಕ ಕುಲಸಚಿವ ಬಿ.ಎಸ್. ಪ್ರಭಾಕರ್, ಕಡೂರು ಶಿವಪ್ರಕಾಶ್, ಚಕೋರ ಸಂಚಾಲಕರಾದ ಲಕ್ಷ್ಮೀ ಶ್ರೀನಿವಾಸ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.