ಸೂಲಿಬೆಲೆ (ಹೊಸಕೋಟೆ): ಯುವ ಬ್ರಿಗೇಡ್ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಅವರ ತಂದೆ, ನಿವೃತ್ತ ಶಿಕ್ಷಕ ದೇವಿದಾಸ್ ಸುಬ್ರಾಯ್ ಸೇಟ್ (82) ಭಾನುವಾರ ನಿಧನರಾದರು.
ಕೆಲವು ದಿನಗಳಿಂದ ಅವರು ಶ್ವಾಸಕೋಶ ಸಮಸ್ಯೆಯಿಂದ ಬಳಲುತ್ತಿದ್ದರು. ಅವರಿಗೆ ಪತ್ನಿ, ಮಗ ಮತ್ತು ಮಗಳು ಇದ್ದಾರೆ. ಸೂಲಿಬೆಲೆಯಲ್ಲಿ ಭಾನುವಾರ ಅಂತ್ಯಕ್ರಿಯೆ ನಡೆಯಿತು.
ಕಾರವಾರ ಜಿಲ್ಲೆಯ ಹೊನ್ನಾವರದ ದೇವಿದಾಸ್ ಅವರು ಸೂಲಿಬೆಲೆಯ ಸ್ವಾಮಿ ವಿವೇಕಾನಂದ ಪ್ರೌಢಶಾಲೆಯಲ್ಲಿ 33 ವರ್ಷ ಕನ್ನಡ ಶಿಕ್ಷಕರಾಗಿದ್ದರು. ನಿವೃತ್ತಿ ನಂತರ ಇಲ್ಲಿಯೇ ನೆಲೆಸಿದ್ದರು. ‘ಡಿಎಸ್‌ಎಸ್ ಮೇಷ್ಟ್ರು’ ಎಂದೇ ಚಿರಪರಿಚಿತರಾಗಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.