ADVERTISEMENT

ಬಾಲ್ಯದಲ್ಲಿ ಕೇಳಿದ ಚಂದ್ರನ ಕಥೆ ಹೇಳಿ!

​ಪ್ರಜಾವಾಣಿ ವಾರ್ತೆ
Published 1 ಆಗಸ್ಟ್ 2019, 19:32 IST
Last Updated 1 ಆಗಸ್ಟ್ 2019, 19:32 IST
ಚಂದ್ರನಕಥೆ
ಚಂದ್ರನಕಥೆ   

ಬೆಂಗಳೂರು: ಚಂದ್ರನ ಕಥೆ ಇಲ್ಲದೆ ಯಾರೊಬ್ಬರ ಬಾಲ್ಯವೂ ಪೂರ್ಣವಾಗುವುದಿಲ್ಲ. ಈ ಕಾರಣಕ್ಕೆ ಚಂದ್ರನ ಕುರಿತ ಕಥೆಗಳನ್ನು ಹೇಳಿ ಎಂದು ‘ಚಂದ್ರಯಾನ–2’ ಉಡಾವಣೆಯ ಹುಮ್ಮಸ್ಸಿನಲ್ಲಿರುವ ಇಸ್ರೊ ಟ್ವಿಟರ್‌ ಮೂಲಕ ‘ಕಥಾಯಾನ’ಕ್ಕೆ ಚಾಲನೆ ನೀಡಿದೆ.

‘ನಿಮ್ಮ ಬಾಲ್ಯದಲ್ಲಿ ಅತ್ಯುತ್ತಮ ಎನಿಸಿದ ಚಂದ್ರನ ಕುರಿತು ಕೇಳಿದ ಕಥೆಗಳನ್ನು ನಮ್ಮ ಜತೆ ಹಂಚಿಕೊಳ್ಳಿ’ ಎಂದು ಟ್ವೀಟ್‌ ಮಾಡಿದ ಬಳಿಕ, ನೂರಾರು ಮಂದಿ ತಮ್ಮದೇ ಆದ ರೀತಿಯಲ್ಲಿ#ChildhoodMemories #Chandrayaan2 #ISROನಲ್ಲಿ ಕಥೆಗಳನ್ನು ಹಂಚಿಕೊಂಡಿದ್ದಾರೆ.

‘ಶಿವ ತನ್ನ ಮುಡಿಯಲ್ಲಿ ಚಂದ್ರನನ್ನು ಯಾಕೆ ಮುಡಿದುಕೊಂಡಿದ್ದಾನೆ’ಎಂದು ಒಬ್ಬರು ಪ್ರಶ್ನಿಸಿದ್ದಾರೆ.

ADVERTISEMENT

‘ಚಂದ್ರ ಯಾಕೆ ಸದಾ ನನ್ನನ್ನು ಹಿಂಬಾಲಿಸುತ್ತಾನೆ ಎಂಬ ಕುತೂಹಲ ಕಾಡುತ್ತಿತ್ತು’ ಎಂದು ಹರ್ಷ್‌ ರಂಜನ್ ಎಂಬುವರು ಹೇಳಿಕೊಂಡಿದ್ದರೆ, ‘ಚಂದ್ರ ಪ್ರೇಯಸಿಯಂತೆ ತೋರುತ್ತಾನೆ’ ಎಂದು ಮತ್ತೊಬ್ಬರು ಹೋಲಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.