ADVERTISEMENT

ಆನ್‌ಲೈನ್‌ನಲ್ಲಿ ಕೇಕ್ ಬುಕ್ಕಿಂಗ್; ವಂಚನೆ

​ಪ್ರಜಾವಾಣಿ ವಾರ್ತೆ
Published 3 ಡಿಸೆಂಬರ್ 2019, 5:50 IST
Last Updated 3 ಡಿಸೆಂಬರ್ 2019, 5:50 IST

ಬೆಂಗಳೂರು: ಆನ್‌ಲೈನ್‌ನಲ್ಲಿ ಕೇಕ್‌ ಕಾಯ್ದಿರಿಸಿದ್ದ ಮಹಿಳೆಯ ಬ್ಯಾಂಕ್ ಖಾತೆಯಿಂದ ₹ 71,500 ಡ್ರಾ ಮಾಡಿಕೊಂಡು ವಂಚಿಸಲಾಗಿದ್ದು, ಈ ಸಂಬಂಧ ಕಬ್ಬನ್ ಪಾರ್ಕ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‘ಹಣ ಕಳೆದುಕೊಂಡಿರುವ ಕಾಟನ್‌ಪೇಟೆಯ ರಾಧಾ ಪ್ರಕಾಶ್ ಎಂಬುವರು ದೂರು ನೀಡಿದ್ದಾರೆ. ಮಾಹಿತಿ ತಂತ್ರಜ್ಞಾನ ಕಾಯ್ದೆಯಡಿ ಅಪರಿಚಿತರ ವಿರುದ್ಧ ಎಫ್‌ಐಆರ್‌ ದಾಖಲಿಸಿಕೊಳ್ಳಲಾಗಿದೆ’ ಎಂದು ಪೊಲೀಸರು ಹೇಳಿದರು.

‘ರಾಧಾ ಅವರು ನವೆಂಬರ್ 29ರಂದು ಲ್ಯಾವೆಲ್ಲೆ ರಸ್ತೆಯಲ್ಲಿರುವ ಅಂಗಡಿಯೊಂದರಲ್ಲಿ ಆನ್‌ಲೈನ್‌ ಮೂಲಕ ಕೇಕ್‌ ಬುಕ್ಕಿಂಗ್ ಮಾಡಿದ್ದರು. ರಾಧಾ ಅವರಿಗೆ ಕರೆ ಮಾಡಿದ್ದ ಅಪರಿಚಿತ, ಕೇಕ್‌ ಬುಕ್ಕಿಂಗ್ ಖಾತ್ರಿಪಡಿಸಬೇಕೆಂದು ಹೇಳಿ ಡೆಬಿಟ್ ಕಾರ್ಡ್‌ ಮಾಹಿತಿ ಕೇಳಿದ್ದ’

ADVERTISEMENT

‘ಆತನ ಮಾತು ನಂಬಿದ್ದ ರಾಧಾ, ಕಾರ್ಡ್ ಮಾಹಿತಿ ಹಾಗೂ ಒನ್‌ ಟೈಂ ಪಾಸ್‌ವರ್ಡ್‌ (ಒಟಿಪಿ) ನೀಡಿದ್ದರು. ಅದಾದ ನಂತರ ಬ್ಯಾಂಕ್ ಖಾತೆಯಿಂದ ಹಣ ಡ್ರಾ ಆಗಿದೆ. ಕೇಕ್‌ ಅಂಗಡಿಯವರನ್ನು ವಿಚಾರಿಸಿದಾಗ ತಾವು ಕರೆ ಮಾಡಿಲ್ಲವೆಂದು ಹೇಳುತ್ತಿದ್ದಾರೆ’ ಎಂದು ಪೊಲೀಸರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.