ರಾಜರಾಜೇಶ್ವರಿನಗರ: ಗಣಿ ಬಾಧಿತ ವ್ಯಾಪ್ತಿಯ ಪಚ್ಚೆಪಾಳ್ಯ, ಬಸಮ್ಮನಹಳ್ಳಿ, ಶಾಂತಿನಗರ, ಸಿ.ಕೆ.ತಾಂಡ್ಯ ಗ್ರಾಮಗಳ 500 ಕುಟುಂಬಗಳಿಗೆ ಪರಿಹಾರವಾಗಿ ತಲಾ ₹ 30 ಸಾವಿರ ಮೊತ್ತದ ಚೆಕ್‍ಗಳನ್ನು ಶಾಸಕ ಎಸ್.ಟಿ.ಸೋಮಶೇಖರ್ ಅವರು ವಿತರಿಸಿದರು.
ಕ್ರಷರ್ ಮಾಲಿಕರ ಸಂಘದ ವತಿಯಿಂದ ನೀಡಿದ ಚೆಕ್‍ಗಳನ್ನು ವಿತರಿಸಿ ಮಾತನಾಡಿದ ಅವರು, ‘10 ವರ್ಷಗಳಿಂದ ಪರಿಹಾರ ನೀಡುತ್ತಿದ್ದು, ಮುಂದಿನ ದಿನಗಳಲ್ಲಿ ಪ್ರತಿ ಗ್ರಾಮಗಳಲ್ಲಿ ಉಚಿತ ಆರೋಗ್ಯ ತಪಾಸಣೆ ಮಾಡಿ ಚಿಕಿತ್ಸೆ ನೀಡುವಂತೆ ಸೂಚನೆ ನೀಡಿದ್ದೇನೆ’ ಎಂದರು.
ಕರ್ನಾಟಕ ರಾಜ್ಯ ಕ್ರಷರ್ ಮಾಲೀಕರ ಸಂಘದ ಅಧ್ಯಕ್ಷ ಡಿ.ಸಿದ್ದರಾಜು ಮಾತನಾಡಿ, ‘ಈ ಬಾರಿ 1200 ಕುಟುಂಬಗಳಿಗೆ ತಲಾ ₹30 ಸಾವಿರದಿಂದ ₹50 ಸಾವಿರದವರೆಗೆ ಚೆಕ್‍ಗಳನ್ನು ನೀಡಲಾಗಿದೆ. ಎಲ್ಲರಿಗೂ ಅಗತ್ಯವಾದ ಕಾರ್ಯಕ್ರಮಗಳನ್ನು ಶಾಸಕರ ಮಾರ್ಗದರ್ಶನದಲ್ಲಿ ಹಮ್ಮಿಕೊಳ್ಳಲಾಗುವುದು’ ಎಂದು ಹೇಳಿದರು.
ಹಾಪ್‍ಕಾಮ್ಸ್ ನಿರ್ದೇಶಕ ಎಂ.ಜೈಕುಮಾರ್, ಗ್ರಾಮ ಪಂಚಾಯಿತಿ ಸದಸ್ಯ ಉಮಾಶಂಕರ್, ಪಚ್ಚೆಪಾಳ್ಯ ಶಿವರಾಮಣ್ಣ, ದೊಡ್ಡೇರಿ ವಾರ್ಡ್ ಕಾಂಗ್ರೆಸ್ ಅಧ್ಯಕ್ಷ ಮಂಜುನಾಥ್ ಸೇರಿದಂತೆ ಜನಪ್ರತಿನಿಧಿಗಳು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.