ಬೆಂಗಳೂರು: ಪ್ರೆಸಿಡೆನ್ಸಿ ವಿಶ್ವವಿದ್ಯಾಲಯವು ‘ಚಿಪ್ ಟು ಕ್ರಾಪ್’ ಶೀರ್ಷಿಕೆಯಡಿ ನಗರದಲ್ಲಿ 24 ಗಂಟೆಗಳ ಹ್ಯಾಕಥಾನ್ ನಡೆಸಿತು.
ಭಾರತೀಯ ಕೃಷಿ ಸಂಶೋಧನಾ ಮಂಡಳಿ (ಐಸಿಎಆರ್) ಮತ್ತು ಭಾರತೀಯ ತೋಟಗಾರಿಕೆ ಸಂಶೋಧನಾ ಸಂಸ್ಥೆ (ಐಐಎಚ್‌ಆರ್) ಸಹಯೋಗದಲ್ಲಿ ಈ ಹ್ಯಾಕಥಾನ್ ಹಮ್ಮಿಕೊಳ್ಳಲಾಗಿತ್ತು. ಐಸಿಎಆರ್–ಐಐಎಚ್‌ಆರ್ ಬೆಂಗಳೂರಿನ ನಿರ್ದೇಶಕ ತುಷಾರ್ ಕಾಂತಿ ಬೆಹೇರಾ ಹಾಗೂ ಪ್ರೆಸಿಡೆನ್ಸಿ ವಿಶ್ವವಿದ್ಯಾಲಯದ ಕುಲಪತಿ ನಿಸ್ಸಾರ್ ಅಹ್ಮದ್ ಅವರು ಈ ಹ್ಯಾಕಥಾನ್‌ನ ಅಂತಿಮ ಸುತ್ತನ್ನು ಉದ್ಘಾಟಿಸಿದರು.
ಕೃಷಿ ಕ್ಷೇತ್ರಕ್ಕೆ ಸಂಬಂಧಿಸಿದಂತೆ ನೈಜ ಸಮಯದಲ್ಲಿ ಪರಿಹಾರೋಪಾಯ ಒದಗಿಸಬೇಕಾದ ಈ ಹ್ಯಾಕಥಾನ್‌ನಲ್ಲಿ, ನೂರಕ್ಕೂ ಅಧಿಕ ಮಂದಿ ಹೆಸರು ನೋಂದಾಯಿಸಿಕೊಂಡಿದ್ದರು. 30 ತಂಡಗಳಾಗಿ ಅಭ್ಯರ್ಥಿಗಳನ್ನು ವಿಂಗಡಿಸಲಾಗಿತ್ತು.
ಅಂತಿಮ ಸುತ್ತಿಗೆ ಆಯ್ಕೆಯಾಗಿದ್ದ ತಂಡಗಳು, ಕೃಷಿ ಕ್ಷೇತ್ರದಲ್ಲಿನ ಸಮಸ್ಯೆಗಳಿಗೆ ಸಂಬಂಧಿಸಿದಂತೆ ತಂತ್ರಜ್ಞಾನ ಆಧಾರಿತ ಪರಿಹಾರೋಪಾಯಗಳನ್ನು ಸೂಚಿಸಿದರು. ಇದನ್ನು ಐಐಎಚ್‌ಆರ್ ವಿಜ್ಞಾನಿಗಳು ಮೌಲ್ಯಮಾಪನ ಮಾಡಿದರು ಎಂದು ಪ್ರಕಟಣೆ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.