ADVERTISEMENT

ಕ್ರಿಸ್‌ಮಸ್‌ ಆಚರಣೆ: ವಿವಿಧೆಡೆ ಯೇಸುವಿನ ಸ್ಮರಣೆ

ವಿದ್ಯುತ್‌ ದೀಪಗಳಿಂದ ಸಿಂಗಾರಗೊಂಡ ಚರ್ಚ್‌ಗಳು: ಸಾಮೂಹಿಕ ಪ್ರಾರ್ಥನೆ

​ಪ್ರಜಾವಾಣಿ ವಾರ್ತೆ
Published 24 ಡಿಸೆಂಬರ್ 2021, 20:19 IST
Last Updated 24 ಡಿಸೆಂಬರ್ 2021, 20:19 IST
ಶಿವಾಜಿನಗರದ ಸಂತ ಬೆಸಿಲಿಕಾ ಚರ್ಚ್‌ನಲ್ಲಿ ಶುಕ್ರವಾರ ರಾತ್ರಿ ಕ್ರೈಸ್ತ ಸಮುದಾಯದವರು ಪ್ರಾರ್ಥನೆ ಸಲ್ಲಿಸಿದರು –ಪ್ರಜಾವಾಣಿ ಚಿತ್ರ
ಶಿವಾಜಿನಗರದ ಸಂತ ಬೆಸಿಲಿಕಾ ಚರ್ಚ್‌ನಲ್ಲಿ ಶುಕ್ರವಾರ ರಾತ್ರಿ ಕ್ರೈಸ್ತ ಸಮುದಾಯದವರು ಪ್ರಾರ್ಥನೆ ಸಲ್ಲಿಸಿದರು –ಪ್ರಜಾವಾಣಿ ಚಿತ್ರ   

ಬೆಂಗಳೂರು: ಕಣ್ಮನ ಸೆಳೆಯುತ್ತಿರುವ ವಿದ್ಯುತ್‌ ದೀಪಗಳಿಂದ ಅಲಂಕೃತಗೊಂಡಿರುವ ಚರ್ಚ್‌ಗಳು, ಯೇಸು ಜನನ ಸಂದೇಶ ಸಾರುವ ಆಕರ್ಷಕ ಗೋದಲಿಗಳು, ಅಲ್ಲಲ್ಲಿ ಕಣ್ಸೆಳೆವ ‘ಕ್ರಿಸ್‌ಮಸ್‌ ಟ್ರೀ’ಗಳು, ಆಗಸವನ್ನು ಚುಂಬಿಸಲು ಹೊರಟನಕ್ಷತ್ರಾಕಾರದ ಆಕಾಶ ಬುಟ್ಟಿಗಳ ಸಾಲು....

ಕ್ರಿಸ್‌ಮಸ್‌ ಹಬ್ಬದ ಸಂಭ್ರಮನಗರದಲ್ಲಿ ಶುಕ್ರವಾರ ಕಂಡು ಬಂದ ಪರಿ ಇದು.

ಶಿವಾಜಿನಗರದ ಸೇಂಟ್‌ ಮೇರಿಸ್‌ ಬೆಸಿಲಿಕಾ, ಫ್ರೇಜರ್‌ ಟೌನ್‌ನ ಸೇಂಟ್ ಫ್ರಾನ್ಸಿಸ್ ಕ್ಸೇವಿಯರ್ ಕೆಥೆಡ್ರಲ್ ಚರ್ಚ್, ಬ್ರಿಗೇಡ್ ರಸ್ತೆಯಲ್ಲಿರುವ ಸೇಂಟ್‌ ಪ್ಯಾಟ್ರಿಕ್ಸ್ ಚರ್ಚ್, ಸೇಂಟ್ ಮಾರ್ಕ್ಸ್ ಕೆಥೆಡ್ರಲ್, ಚಾಮರಾಜಪೇಟೆಯ ಸೇಂಟ್ ಜೋಸೆಫ್ ಚರ್ಚ್, ಸೇಂಟ್ ಜಾನ್ಸ್ ಚರ್ಚ್ ಸೇರಿದಂತೆ ನಗರದ ಅನೇಕ ಚರ್ಚ್‌ಗಳು ವಿದ್ಯುತ್‌ ದೀಪಗಳ ಅಲಂಕಾರದಿಂದ ಕಂಗೊಳಿಸಿದವು. ಚರ್ಚ್‌ಗಳ ಆವರಣದಲ್ಲಿ ನಿರ್ಮಿಸಿರುವ ‘ಗೋದಲಿ’ಗಳು ಒಂದಕ್ಕಿಂತ ಒಂದು ಸುಂದರವಾಗಿವೆ. ಸಾಂತಾ ಕ್ಲಾಸ್‌ನ ಪ್ರತಿರೂಪಗಳು ಚರ್ಚ್‌ಗಳ ಆವರಣದ ಮೆರುಗು ಹೆಚ್ಚಿಸಿವೆ.

ADVERTISEMENT

ಸೇಂಟ್‌ ಬೆಸಿಲಿಕಾ ಚರ್ಚ್‌ ಸೇರಿದಂತೆ ನಗರದಲ್ಲಿರುವ ಚರ್ಚ್‌ಗಳಲ್ಲಿ ಕ್ರೈಸ್ತರು ಶುಕ್ರವಾರ ರಾತ್ರಿ ವಿಶೇಷ ಪ್ರಾರ್ಥನೆಗಳು ನಡೆದವು. ಶನಿವಾರ ಬೆಳಿಗ್ಗೆ ಕ್ರಿಸ್‌ಮಸ್‌ ಪ್ರಯುಕ್ತ ವಿಶೇಷ ಪ್ರಾರ್ಥನೆ, ಧರ್ಮ ಬೋಧನೆಗಳು ನಡೆಯಲಿವೆ. ಕ್ರೈಸ್ತ ಸಮುದಾಯದವರು ಚರ್ಚ್‌ಗೆ ತೆರಳಲಿ ಸಾಮೂಹಿಕ ಪ್ರಾರ್ಥನೆ ಕೈಗೊಳ್ಳಲಿದ್ದಾರೆ.

ಮಾರುಕಟ್ಟೆಗಳಲ್ಲಿ ಕ್ರಿಸ್‌ಮಸ್‌ಗಾಗಿ ಅಲಂಕಾರಿಕ ವಸ್ತುಗಳು, ಉಡುಗೊರೆಗಳ ಖರೀದಿಯೂ ಜೋರಾಗಿ ನಡೆಯಿತು. ಮಾಲ್‍ಗಳಲ್ಲೂ ವಿಶೇಷ ವಿದ್ಯುತ್‌ ದೀಪಾಲಂಕಾರ ಮಾಡಲಾಗಿದೆ. ಗ್ರಾಹಕರನ್ನು ಸೆಳೆಯಲು ಸ್ಥಾಪಿಸಿರುವ ಕ್ರಿಸ್‌ಮಸ್‌ ವೃಕ್ಷಗಳು ರಂಗು ರಂಗಿನ ದೀಪಗಳಿಂದ ಕಣ್ಸೆಳೆಯುತ್ತಿವೆ. ಬೇಕರಿಗಳಲ್ಲಿ ವಿಶೇಷ ಕೇಕ್‌ಗಳ ಪ್ರದರ್ಶನ ಹಾಗೂ ಮಾರಾಟ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.