ADVERTISEMENT

ಫೋರಂ ಮಾಲ್: 30 ಅಡಿ ಎತ್ತರದ ಡಿಜಿಟಲ್ ‘ಕ್ರಿಸ್‌ಮಸ್‌ ಟ್ರೀ’

​ಪ್ರಜಾವಾಣಿ ವಾರ್ತೆ
Published 24 ಡಿಸೆಂಬರ್ 2021, 20:25 IST
Last Updated 24 ಡಿಸೆಂಬರ್ 2021, 20:25 IST
ಕೋರಮಂಗಲದ ಫೋರಂ ಮಾಲ್‌ನಲ್ಲಿ ನಿಲ್ಲಿಸಲಾಗಿರುವ ಡಿಜಿಟಲ್ ‘ಕ್ರಿಸ್‌ಮಸ್‌ ಟ್ರೀ’
ಕೋರಮಂಗಲದ ಫೋರಂ ಮಾಲ್‌ನಲ್ಲಿ ನಿಲ್ಲಿಸಲಾಗಿರುವ ಡಿಜಿಟಲ್ ‘ಕ್ರಿಸ್‌ಮಸ್‌ ಟ್ರೀ’   

ಬೆಂಗಳೂರು: ಕ್ರಿಸ್‌ಮಸ್‌ ಹಾಗೂ ಹೊಸ ವರ್ಷಾಚರಣೆ ಅಂಗವಾಗಿ ಕೋರಮಂಗಲದ ಫೋರಂ ಮಾಲ್‌ನಲ್ಲಿಎಲ್ಇಡಿ ಪರದೆಗಳಿಂದ ಕೂಡಿದ 30 ಅಡಿ ಎತ್ತರದ ಡಿಜಿಟಲ್ ‘ಕ್ರಿಸ್‌ಮಸ್‌ ಟ್ರೀ’ ಸ್ಥಾಪಿಸಲಾಗಿದೆ.

ಪರದೆಗಳಲ್ಲಿ ಸಾಮಾಜಿಕ ಸಂದೇಶಗಳು, ವಿವಿಧ ಬ್ರ್ಯಾಂಡ್ ಕೊಡುಗೆಗಳು ಪ್ರದರ್ಶನಗೊಳ್ಳಲಿವೆ. ಮಾಲ್‌ಗೆ ಬರುವ ಸಾರ್ವಜನಿಕರ ಭಾವಚಿತ್ರವನ್ನು ಆ ಪರದೆಗಳಲ್ಲಿ ಪ್ರದರ್ಶಿಸುವ ವ್ಯವಸ್ಥೆಯೂ ಇದೆ. ಶುಭಾಶಯ ಕೋರುವವರು ವಿಡಿಯೊ ಅಥವಾ ಭಾವಚಿತ್ರಗಳನ್ನು ಸೆರೆ ಹಿಡಿದು, ಸಾಮಾಜಿಕ ಜಾಲತಾಣಗಳಲ್ಲಿ ಫೋರಂ ಮಾಲ್‌ಗೆ ಟ್ಯಾಗ್‌ ಮಾಡಿದರೆ, ಅದನ್ನು ಕ್ರಿಸ್‌ಮಸ್‌ ಟ್ರೀ ಪರದೆಗಳಲ್ಲಿ ಪ್ರದರ್ಶಿಸಲಾಗುತ್ತಿದೆ. ಮೊದಲ ದಿನ ಸುಮಾರು 150ಕ್ಕೂ ಹೆಚ್ಚು ಮಂದಿಯ ಭಾವಚಿತ್ರಗಳನ್ನು ಪರದೆಯಲ್ಲಿ ಪ್ರದರ್ಶಿಸಲಾಯಿತು.

ವೈಟ್‌ಫೀಲ್ಡ್‌ನ ಫೋರಂ ನೇಬರ್‌ಹುಡ್ ಮಾಲ್‌ನಲ್ಲಿ ₹10 ಸಾವಿರಕ್ಕಿಂತ ಮೇಲ್ಪಟ್ಟು ಖರೀದಿ ಮಾಡುವವರಿಗೆ ವಿಶೇಷ ಬಹುಮಾನಗಳನ್ನು ವಿತರಿಸಲಾಗುತ್ತಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.