ಬೆಂಗಳೂರು: ತೆರೆದ ಬಾವಿಗಳ ಪುನರುಜ್ಜೀವನಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ಪುರವಂಕರ ಕಂಪನಿಗೆ ‘ಸಿಐಡಿಸಿ ವಿಶ್ವಕರ್ಮ ಪ್ರಶಸ್ತಿ’ ದೊರೆತಿದೆ.
ನಿರ್ಮಾಣ ಉದ್ಯಮ ಅಭಿವೃದ್ಧಿ ಮಂಡಳಿಯು (ಸಿಐಡಿಸಿ) ನವದೆಹಲಿಯಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ 15ನೇ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಸಂಸ್ಥೆಯು ಈ ಪ್ರಶಸ್ತಿಯನ್ನು ಸ್ವೀಕರಿಸಿದೆ.
ಬೆಂಗಳೂರಿನ ಬಯೋ ಎನ್ವಿರಾನ್ಮೆಂಟಲ್ ಟ್ರಸ್ಟ್ ಹಮ್ಮಿಕೊಂಡಿರುವ ‘ಬೆಂಗಳೂರಿಗಾಗಿ ದಶಲಕ್ಷ ಇಂಗು ಬಾವಿಗಳು’ ಅಭಿಯಾನದಡಿ ತೆರೆದ ಬಾವಿಗಳನ್ನು ಪುನಶ್ಚೇತನಗೊಳಿಸುವ ಕಾರ್ಯದಲ್ಲಿ ಪುರವಂಕರ ಕಂಪನಿ ಕೈಜೋಡಿಸಿದೆ.
‘ಈ ಪ್ರತಿಷ್ಠಿತ ಪ್ರಶಸ್ತಿಯು ನಮ್ಮ ಕಂಪನಿಯ ಸಾಮಾಜಿಕ ಜವಾಬ್ದಾರಿ ಮತ್ತು ಪರಿಸರ ನಿರ್ವಹಣೆಗೆ ಸಾಕ್ಷಿಯಾಗಿದೆ. ‘ದಶಲಕ್ಷ ಇಂಗು ಬಾವಿಗಳ’ ಅಭಿಯಾನವು ನಗರದಲ್ಲಿ ಕುಸಿಯುತ್ತಿರುವ ನೀರಿನ ಮಟ್ಟವನ್ನು ತಡೆಯುವ ಗುರಿಯನ್ನು ಹೊಂದಿದೆ‘ ಎಂದು ಪುರವಂಕರ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಆಶಿಶ್ ಪುರವಂಕರ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.