ADVERTISEMENT

ಸಿಐಐ: ಆವಿಷ್ಕಾರ ಸಮ್ಮೇಳನ ಆ.21ರಿಂದ

​ಪ್ರಜಾವಾಣಿ ವಾರ್ತೆ
Published 10 ಆಗಸ್ಟ್ 2019, 19:31 IST
Last Updated 10 ಆಗಸ್ಟ್ 2019, 19:31 IST

ಬೆಂಗಳೂರು:ಭಾರತೀಯ ಕೈಗಾರಿಕಾ ಒಕ್ಕೂಟವು (ಸಿಐಐ) ನಗರದ ತಾಜ್‌ ವೆಸ್ಟ್‌ ಎಂಡ್‌ ಹೋಟೆಲ್‌ನಲ್ಲಿ ಇದೇ 21 ಮತ್ತು 22ರಂದು 15ನೇ ಭಾರತ ಆವಿಷ್ಕಾರ ಸಮಾವೇಶ ಆಯೋಜಿಸಿದೆ. ‘ಮುಂದಿನ 10 ವರ್ಷಗಳಲ್ಲಿ ಅನ್ವೇಷಣೆಯ ಪ್ರಣಾಳಿಕೆ’ ವಿಷಯದಡಿ ಸಮ್ಮೇಳನ ನಡೆಯಲಿದೆ.

ಸಮಾವೇಶದ ಮುಖ್ಯಸ್ಥ ಕ್ರಿಸ್‌ ಗೋಪಾಲಕೃಷ್ಣನ್‌, ‘ಹೊಸ ಅನ್ವೇಷಣೆ ಎನ್ನುವುದು ಭವಿಷ್ಯದ ಮಹತ್ವದ ಅಂಶಗಳಲ್ಲೊಂದು. ಕೈಗಾರಿಕೆಗಳ ಮುಖ್ಯಸ್ಥರು, ಶಿಕ್ಷಣತಜ್ಞರು, ತಂತ್ರಜ್ಞರು, ಯುವ ಸಂಶೋಧಕರು ಮತ್ತು ನೀತಿ ನಿರೂಪಕರನ್ನು ಒಂದೆಡೆ ಸೇರಿಸಿ, ಅವರಿಗೆ ವೇದಿಕೆ ಒದಗಿಸಲಾಗುತ್ತದೆ’ ಎಂದು ಇಲ್ಲಿ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ತ್ರಿಎಂ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ರಮೇಶ್‌ ರಾಮದೊರೈ, ‘ಹೊಸ ಅನ್ವೇಷಣೆಗಳನ್ನು ರೂಪಿಸಿದವರಿಗೆ ಸಮಾವೇಶದಲ್ಲಿ ಬಹುಮಾನ ನೀಡಲಾ ಗುತ್ತದೆ’ ಎಂದರು.

ADVERTISEMENT

ಹವಾಮಾನ ಬದಲಾವಣೆ ಮತ್ತು ಸುಸ್ಥಿರತೆ, 5ಜಿ ಜಮಾನ, ಭಾಷೆಗಳ ಮೇಲೆ ಡಿಜಿಟಲೀಕರಣದ ಪರಿಣಾಮ, ಸಂಚಾರ ವ್ಯವಸ್ಥೆಯಲ್ಲಿ ಹೊಸ ಅನು ಕ್ರಮ, ಫಿಟ್‌ನೆಸ್‌ನಲ್ಲಿ ತಂತ್ರಜ್ಞಾನ ಮತ್ತು ಮೂಲವಿಜ್ಞಾನದ ಕುರಿತು ಗೋಷ್ಠಿ ಗಳು ಇರಲಿವೆ ಎಂದು ಕ್ರಯಾನ್‌ ಡೇಟಾ ಪಿಟಿಇ ಕಂಪನಿಯ ಸಹ ಸ್ಥಾಪಕ ಐ. ವಿಜಯ್‌ಕುಮಾರ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.