ADVERTISEMENT

ಬೂತ್‌ ಮಟ್ಟದಲ್ಲಿ ನಾಗರಿಕ ಕಾರ್ಯಪಡೆ

​ಪ್ರಜಾವಾಣಿ ವಾರ್ತೆ
Published 4 ಜುಲೈ 2020, 21:54 IST
Last Updated 4 ಜುಲೈ 2020, 21:54 IST
ಬಿಬಿಎಂಪಿ
ಬಿಬಿಎಂಪಿ   

ಬೆಂಗಳೂರು: ಹೋಮ್ ಕ್ವಾರಂಟೈನ್‌ನಲ್ಲಿ ಇರುವವರ ಮೇಲೆ ನಿಗಾ ಇಡಲು ಪ್ರತಿ ಬೂತ್ ಮಟ್ಟದಲ್ಲಿ ನಾಗರಿಕರನ್ನು ಒಳಗೊಂಡ ಕಾರ್ಯಪಡೆ ರಚಿಸಲು ಸರ್ಕಾರ ಮುಂದಾಗಿದೆ.

300ರಿಂದ 400 ಮನೆಗಳನ್ನು ಸೇರಿಸಿ ಒಂದು ಬೂತ್ ಎಂದು ಗುರುತಿಸಲಾಗುವುದು. ಅಲ್ಲಿಗೆ ಒಬ್ಬರು ಬೂತ್‌ ಮಟ್ಟದ ಅಧಿಕಾರಿ ನೇಮಕಗೊಳ್ಳಲಿದ್ದಾರೆ. ಕಾರ್ಯಪಡೆಯಲ್ಲಿ ಸೇರಿಕೊಳ್ಳುವ ನಾಗರಿಕರಿಗೆ 50 ರಿಂದ 100 ಮನೆಗಳ ಜವಾಬ್ದಾರಿ ನೀಡಲಾಗುತ್ತದೆ. ಆ ಪ್ರದೇಶದಲ್ಲಿ ಹೋಮ್ ಕ್ವಾರಂಟೈನ್‌ನಲ್ಲಿರುವ ಜನರು ಸರ್ಕಾರದ ನಿಯಮಗಳನ್ನು ಉಲ್ಲಂಘಿಸಿದರೆ ಬೂತ್ ಮಟ್ಟದ ಅಧಿಕಾರಿಗೆ ಮಾಹಿತಿ ನೀಡುವುದು ಕಾರ್ಯಪಡೆ ಸದಸ್ಯರ ಜವಾಬ್ದಾರಿ.

ಕಾರ್ಯಪಡೆಗೆ ಸೇರ್ಪಡೆಯಾಗುವ ನಾಗರಿಕರು ಸ್ವಯಂ ಪ್ರೇರಿತವಾಗಿ ನೊಂದಾಯಿಸಿಕೊಳ್ಳಲು ಆನ್‌ಲೈನ್‌ನಲ್ಲಿ ಬಿಬಿಎಂಪಿ ಅವಕಾಶ ಕಲ್ಪಿಸಿದೆ. ಶನಿವಾರ ರಾತ್ರಿವರೆಗೆ 8,924 ನಾಗರಿಕರು ನೊಂದಾಯಿಸಿಕೊಂಡಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.