ಮೆಟ್ರೊ ಪಿಲ್ಲರ್‌ಗಳ ಮೇಲೆ ಬಯೋಕಾನ್‌ನಿಂದ ಮೂಡಿದ ‘ಸಿಟಿ ಸೆಲೆಬ್ರಿಟಿ'ಗಳು!
ಬೆಂಗಳೂರು: ಬೆಂಗಳೂರು ನಗರದ 50ಕ್ಕೂ ಹೆಚ್ಚು ಮೆಟ್ರೊ ಸ್ಥಂಭಗಳಿಗೆ ಚನ್ನಪಟ್ಟಣದ ಕಲೆಯನ್ನು ಬಿಂಬಿಸುವ ಕಲಾಕೃತಿಗಳನ್ನು ಬಯೋಕಾನ್ ಫೌಂಡೇಷನ್‌ನ ಸಿಎಸ್‌ಆರ್ ಅಡಿಯಲ್ಲಿ ಚಿತ್ರಿಸಲಾಗಿದ್ದು ಗಮನ ಸೆಳೆಯುತ್ತಿವೆ.
ಹುಸ್ಕೂರು ಗೇಟ್‌ನಿಂದ ಹೆಬ್ಬಗೋಡಿ ಮೆಟ್ರೊ ನಿಲ್ದಾಣದವರೆಗೂ ಬರುವ 50 ಮೆಟ್ರೊ ಪಿಲ್ಲರ್‌ಗಳ ಮೇಲೆ ಚನ್ನಪಟ್ಟಣದ ಕಲೆಯನ್ನು ಬಿಂಬಿಸುವ ಕಲಾಕೃತಿಗಳನ್ನು ಸುಂದರವಾಗಿ ಚಿತ್ರಿಸಲಾಗಿದೆ.
‘‘ಪಿಲ್ಲರ್ ಆಫ್ ಬೆಂಗಳೂರು- ಪ್ರತಿನಿತ್ಯದ ಚಾಂಪಿಯನ್‌ಗಳ ಸಂಭ್ರಮಾಚರಣೆ" ಶೀರ್ಷಿಕೆಯಡಿ ಈ ಚಿತ್ತಾರಗಳನ್ನು ಬಿಡಿಸಲಾಗಿದೆ.
ನಮ್ಮ ದೈನಂದಿನ ಜೀವನದ ಚಾಪಿಂಯನ್ಸ್‌ಗಳಾದ ಹೂ ಮಾರಾಟಗಾರರು, ಎಲೆಕ್ಟ್ರೀಷಿಯನ್, ಟೈಲರ್‌ಗಳು, ಪ್ಲಂಬರ್ಸ್, ವೈದ್ಯರು, ದಾದಿಯರು, ಸಂಗೀತಗಾರರು, ವಿಜ್ಞಾನಿಗಳು, ಐಟಿ ವೃತ್ತಿಪರರು, ಏರೋಸ್ಪೇಸ್ ಸೇರಿದಂತೆ ನಮ್ಮ ಪ್ರತಿನಿತ್ಯದ ಜೀವನದ ಭಾಗವಾಗಿರುವ ಎಲ್ಲಾ ಪಾತ್ರದಾರಿಗಳ ಚಿತ್ರವನ್ನು ಚನ್ನಪಟ್ಟಣದ ಗೊಂಬೆಗಳಂತೆ ಸುಂದರವಾದ ಕೆತ್ತನೆಯ ರೀತಿಯಲ್ಲಿ ಚಿತ್ರಿಸಲಾಗಿದೆ.
ಬಯೋಕಾನ್ ಫೌಂಡೇಶನ್‌ನ ಮಿಷನ್ ನಿರ್ದೇಶಕಿ ಡಾ. ಅನುಪಮಾ ಶೆಟ್ಟಿ ಮಾತನಾಡಿ, ‘ಪಿಲ್ಲರ್ಸ್ ಆಫ್ ಬೆಂಗಳೂರು’ ನಮ್ಮ ದೈನಂದಿನ ಸೆಲೆಬ್ರೆಟಿಗಳನ್ನು ನೆನೆಯಲು ಈ ವಿನೂತನ ಉಪಕ್ರಮವನ್ನು ಕೈಗೆತ್ತಿಕೊಳ್ಳಲಾಗಿದೆ ಎಂದರು.
ಹುಸ್ಕೂರ್ ಗೇಟ್ ನಿಂದ ಪ್ರಾರಂಭವಾಗುವ ಮೆಟ್ರೋ ಪಿಲ್ಲರ್‌ಗಳ ಮೇಲೆ ಕ್ರಿಯಾತ್ಮಕವಾಗಿ ಹಾಗೂ ನಮ್ಮ ನಗರದ ಸಾಂಪ್ರದಾಯಿಕ ಕಲೆಯನ್ನು ಬಿಂಬಿಸುವ ಕಲಾಕೃತಿಗಳನ್ನು ಚಿತ್ರಿಸಲಾಗಿದ್ದು, ನೋಡುಗರನ್ನು ಮನಸೂರೆಗೊಳಿಸುತ್ತವೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.