ADVERTISEMENT

ಪಿ.ಎಫ್ ಪ್ರಾದೇಶಿಕ ಕಚೇರಿಯಲ್ಲಿ ವಿಶೇಷ ಸ್ವಚ್ಛತಾ ಅಭಿಯಾನ

​ಪ್ರಜಾವಾಣಿ ವಾರ್ತೆ
Published 27 ಅಕ್ಟೋಬರ್ 2022, 20:45 IST
Last Updated 27 ಅಕ್ಟೋಬರ್ 2022, 20:45 IST
ಸ್ವಚ್ಛತಾ ಕಾರ್ಯದಲ್ಲಿ ತೊಡಗಿದ್ದ ಸಿಬ್ಬಂದಿ
ಸ್ವಚ್ಛತಾ ಕಾರ್ಯದಲ್ಲಿ ತೊಡಗಿದ್ದ ಸಿಬ್ಬಂದಿ   

ಯಲಹಂಕ: ಕೇಂದ್ರ ಸರ್ಕಾರದ ಆದೇಶದ ಮೇರೆಗೆ ‘ವಿಶೇಷ ಸ್ವಚ್ಛತಾ ಅಭಿಯಾನ- 2.0’ ಕಾರ್ಯಕ್ರಮದಡಿಯಲ್ಲಿ ಇಲ್ಲಿನ ಕಾರ್ಮಿಕರ ಭವಿಷ್ಯ ನಿಧಿ ಸಂಘಟನೆ ಪ್ರಾದೇಶಿಕ ಕಚೇರಿಯಲ್ಲಿ ಅಕ್ಟೋಬರ್ 2ರಿಂದ 31ರ ವರೆಗೆ ಸ್ವಚ್ಛತಾ ಕಾರ್ಯವನ್ನು ನಡೆಸ
ಲಾಗುತ್ತಿದೆ.

ಈ ಅವಧಿಯಲ್ಲಿ ಯಲಹಂಕದ ಪ್ರಾದೇಶಿಕ ಕಚೇರಿಯ ಆಯುಕ್ತ ಯಶೋವರ್ಧನ್ ಶ್ರೀವಾಸ್ತವ ಅವರ ಮಾರ್ಗದರ್ಶನ ಮತ್ತು ಮೇಲುಸ್ತುವಾರಿಯಲ್ಲಿ ಕಚೇರಿಯ ಆವರಣ, ಅನುಪಯುಕ್ತ ವಸ್ತುಗಳ ಕೊಠಡಿ, ದಾಖಲೆಗಳ ಕೊಠಡಿ, ಹಸಿ- ಒಣಕಸ ವಿಂಗಡಣೆ ಸೇರಿ 10 ಸ್ಥಳಗಳನ್ನು ಗುರುತಿಸಿ, ಸ್ವಚ್ಚತಾಕಾರ್ಯ ಕೈಗೊಳ್ಳಲಾಗಿತ್ತು.

ಈ ಸಂದರ್ಭದಲ್ಲಿ 2 ಸಾವಿರ ಕಡತಗಳನ್ನು ವಿಂಗಡಿಸಿ, ಬೇಕಾಗಿರುವ ಕಡತಗಳನ್ನು ಸಂಗ್ರಹಿಸಿಡುವುದರ ಜೊತೆಗೆ ಅನುಪಯುಕ್ತ ಕಡತಗಳನ್ನು ತೆರವುಗೊಳಿಸಲಾಯಿತು. ಇದರಿಂದ ಕಚೇರಿಯ 532 ಚದರಡಿ ವಿಸ್ತೀರ್ಣದ ಜಾಗವನ್ನು ಸಾರ್ವಜನಿಕರ ಸೇವೆಗೆ ಬಳಸಿಕೊಳ್ಳಲು ಅನುಕೂಲವಾಯಿತು.

ADVERTISEMENT

ಅನವಶ್ಯಕ ಕಡತಗಳನ್ನು ವಿಲೇವಾರಿ ಮಾಡುವುದರ ಮೂಲಕ ಬಾಕಿ ಕೆಲಸವನ್ನು ಕಡಿಮೆ ಮಾಡುವುದು, ಆಂತರಿಕ ಮೇಲ್ವಿಚಾರಣೆ ಕಾರ್ಯವಿಧಾನಗಳನ್ನು ಉನ್ನತೀಕರಣಗೊಳಿಸುವುದು ಹಾಗೂ ಸ್ವಚ್ಛತೆಯ ಕುರಿತು ಸಿಬ್ಬಂದಿಗೆ ಜಾಗೃತಿ ಮೂಡಿಸುವುದರ ಜೊತೆಗೆ ತರಬೇತಿ ನೀಡಲಾಗುವುದು. ಆ ಮೂಲಕ ಸಾರ್ವಜನಿಕರಿಗೆ ಕಡಿಮೆ ಸಮಯದಲ್ಲಿ ಉತ್ತಮ ಸೇವೆ ಒದಗಿಸುವುದು ಈ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ ಎಂದು ಯಶೋವರ್ಧನ್ ಶ್ರೀ ವಾಸ್ತವ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.