ದಾಬಸ್‌ಪೇಟೆ ಸಮೀಪದ ದೇವರಹೊಸಹಳ್ಳಿಯಲ್ಲಿರುವ ಭದ್ರಕಾಳಮ್ಮ, ವೀರಭದ್ರಸ್ವಾಮಿ ದೇವಸ್ಥಾನದಲ್ಲಿ ಸ್ವಚ್ಛತಾ ಕಾರ್ಯ ನಡೆಸಿದ ಸ್ವಯಂ ಜಾಗೃತಿ ಸೇವಾ ಟ್ರಸ್ಟ್ ಸದಸ್ಯರು
ಬೆಂಗಳೂರು: ದಾಬಸ್‌ಪೇಟೆ ಸಮೀಪದ ದೇವರಹೊಸಹಳ್ಳಿಯಲ್ಲಿರುವ ಭದ್ರಕಾಳಮ್ಮ, ವೀರಭದ್ರಸ್ವಾಮಿ ದೇವಸ್ಥಾನದಲ್ಲಿ ಸ್ವಯಂ ಜಾಗೃತಿ ಸೇವಾ ಟ್ರಸ್ಟ್‌ನಿಂದ ಸ್ವಚ್ಛತಾ ಕಾರ್ಯ ನಡೆಯಿತು.
ಟ್ರಾವೆಲ್‌ಲೈಟ್ಸ್ ಇಂಡಿಯಾದ ಮಾಲೀಕ ಕುಶಾಲ್ ಅವರ ಸಹಯೋಗದಲ್ಲಿ ಸ್ವಯಂ ಜಾಗೃತಿ ಸೇವಾ ಟ್ರಸ್ಟ್‌ನ ಸದಸ್ಯರು ಭಾನುವಾರ ದೇವಸ್ಥಾನದ ಸುತ್ತಮುತ್ತ ಸ್ವಚ್ಛತಾ ಕಾರ್ಯದಲ್ಲಿ ನಡೆಸಿದರು. ಆವರಣದಲ್ಲಿದ್ದ ಪ್ಲಾಸ್ಟಿಕ್ ಹಾಗೂ ಇತರೆ ತ್ಯಾಜ್ಯವನ್ನು ತೆರವುಗೊಳಿಸಿದರು.
ಪರಿಸರ ಸಂರಕ್ಷಣೆಯ ಸಲುವಾಗಿ ಸುಮಾರು 250 ಗಿಡಗಳನ್ನು ನೆಡಲಾಯಿತು. ದೇವಸ್ಥಾನದ ಸುತ್ತಲೂ ಸ್ವಚ್ಛತಾ ಕಾರ್ಯ ಮಾಡಿ, ಭಕ್ತಾದಿಗಳಿಗೆ ಪರಿಸರ ಮಾಲಿನ್ಯದಿಂದಾಗುವ ಪರಿಣಾಮವನ್ನು ತಿಳಿಸಲಾಯಿತು.
ಸ್ವಯಂ ಜಾಗೃತಿ ಸೇವಾ ಟ್ರಸ್ಟ್ ರಾಜ್ಯ ಘಟಕದ ಅಧ್ಯಕ್ಷ ಅಜಯ್ ಕುಮಾರ್, ಸದಸ್ಯರಾದ ಸಂತೋಷ್ ಹಿಂಬಾಳೆ, ಮಲ್ಲೇಶ್ ಗೌಡ, ಪ್ರಚಾರ ಸಮಿತಿ ಅಧ್ಯಕ್ಷ ಶ್ರೀಕಾಂತ್ ಕನ್ನಡಿಗ, ಚರಣ್, ವಿನಾಯಕ, ಚೇತನ್, ರಾಜೇಶ್, ನಿಂಗರಾಜ್, ನವೀನ್, ಪ್ರವೀಣ್, ರಂಜಿತ್, ರಂಗರಾಜ್, ಮೋಹನ್ ಕುಮಾರ್, ಅರವಿಂದ್, ನವೀನ್, ಸಂತೋಷ್, ಪ್ರಸಾದ್ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.