ADVERTISEMENT

ಚಿನ್ನಾಭರಣ ಕದ್ದಿದ್ದ ಬಟ್ಟೆ ವ್ಯಾಪಾರಿ ಸೆರೆ

​ಪ್ರಜಾವಾಣಿ ವಾರ್ತೆ
Published 29 ಅಕ್ಟೋಬರ್ 2018, 20:00 IST
Last Updated 29 ಅಕ್ಟೋಬರ್ 2018, 20:00 IST
   

ಬೆಂಗಳೂರು: ಜಯನಗರದ ತಾಜ್‌ಪೀರ್ ಎಂಬುವರ ಮನೆಯಲ್ಲಿ ಚಿನ್ನಾಭರಣ ಕಳವು ಮಾಡಿದ್ದ ಆರೋಪದಡಿ ಮಹಮದ್ ಸಾಜಿದ್ (20) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.

ಚಿಕ್ಕಬಳ್ಳಾಪುರದ ಚಿಂತಾಮಣಿಯ ಆರೋಪಿ, ಬಟ್ಟೆ ವ್ಯಾಪಾರಿ. ಆತನಿಂದ ₹10 ಲಕ್ಷ ಮೌಲ್ಯದ ಚಿನ್ನಾಭರಣ ಜಪ್ತಿ ಮಾಡಲಾಗಿದೆ.

‘ಆರೋಪಿ, ದೂರುದಾರ ತಾಜ್‌ಪೀರ್‌ರ ಅಣ್ಣನ ಮಗನಾದ ಚಿಕ್ಕಬಳ್ಳಾಪುರದ ವಲಿಜಾನ್‌ನನ್ನು ಪರಿಚಯ ಮಾಡಿಕೊಂಡಿದ್ದ. ಅವರ ಜೊತೆಗೆ ಆಗಾಗ ತಾಜ್‌ಪೀರ್‌ ಅವರ ಮನೆಗೂ ಹೋಗಿಬರುತ್ತಿದ್ದ. ದೂರುದಾರರು ಮಗಳ ಮದುವೆಗೆಂದು ಚಿನ್ನಾಭರಣ ಖರೀದಿಸಿಟ್ಟಿದ್ದರು. ಅದನ್ನು ತಿಳಿದುಕೊಂಡಿದ್ದ ಆರೋಪಿ ಮನೆಯ ಕೀ ಕದ್ದು, ಯಾರೂ ಇಲ್ಲದ ವೇಳೆಯಲ್ಲಿ ಒಳನುಗ್ಗಿ ಚಿನ್ನಾಭರಣ ಕದ್ದೊಯ್ದಿದ್ದ’ ಎಂದು ಪೊಲೀಸರು ಹೇಳಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.