ADVERTISEMENT

ಮುನಿರತ್ನ ವಿರುದ್ಧದ ದೂರು ವಾಪಸು

​ಪ್ರಜಾವಾಣಿ ವಾರ್ತೆ
Published 17 ಆಗಸ್ಟ್ 2019, 20:03 IST
Last Updated 17 ಆಗಸ್ಟ್ 2019, 20:03 IST
   

ಬೆಂಗಳೂರು: ಶಾಸಕ ಸ್ಥಾನದಿಂದಅನರ್ಹಗೊಂಡಿರುವ ಮುನಿರತ್ನ ವಿರುದ್ಧ ಮತದಾರರ ನಕಲಿ ಗುರುತಿನ ಚೀಟಿ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್‌ಐಆರ್‌ ದಾಖಲಿಸಬೇಕು ಎಂದು ಕೋರಿ ಜನಪ್ರತಿನಿಧಿಗಳ ಕೋರ್ಟ್‌ನಲ್ಲಿ ದಾಖಲಿಸಿದ್ದ ಖಾಸಗಿ ದೂರನ್ನು, ದೂರುದಾರ ಎನ್‌.ರಾಕೇಶ್‌ ಹಿಂಪಡೆದಿದ್ದಾರೆ.

ಈ ಕುರಿತಂತೆ, ‘ಶಾಸಕರು– ಸಂಸದರ ವಿರುದ್ಧದ ಕ್ರಿಮಿನಲ್ ಪ್ರಕರಣಗಳ ವಿಚಾರಣೆಯ ವಿಶೇಷ ನ್ಯಾಯಾಲಯ’ಕ್ಕೆ ರಾಕೇಶ್‌ ಪರ ವಕೀಲರು ಶನಿವಾರ‌ ಮೆಮೊ (ಜ್ಞಾಪನಾ ಪತ್ರ) ಸಲ್ಲಿಸಿದರು. ಇದನ್ನು ದಾಖಲಿಸಿಕೊಂಡ ನ್ಯಾಯಾಧೀಶ ರಾಮಚಂದ್ರ ಡಿ.ಹುದ್ದಾರ ಅವರು, ‘ದೂರುದಾರರು ಈ ರೀತಿ ಅರ್ಜಿ ಹಿಂಪಡೆಯುತ್ತಿರುವುದು ಕಾನೂನಿನ ದುರುಪಯೋಗ ಮಾಡಿದಂತೆ. ಅಲ್ಲದೆ, ಕೋರ್ಟ್‌ ಸಮಯವನ್ನು ವ್ಯರ್ಥಗೊಳಿಸಿದಂತಾಗುತ್ತಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಜಾಲಹಳ್ಳಿ ಅಪಾರ್ಟ್‌ಮೆಂಟ್‌ವೊಂದರಲ್ಲಿ 2018ರ ವಿಧಾನಸಭಾ ಚುನಾವಣೆ ವೇಳೆಯಲ್ಲಿ 10 ಸಾವಿರಕ್ಕೂ ಹೆಚ್ಚು ನಕಲಿ ಗುರುತಿನ ಚೀಟಿ ಪತ್ತೆಗೆ ಸಂಬಂಧಿಸಿದ ಪ್ರಕರಣವಿದು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.