ADVERTISEMENT

ಕಟ್ಟಡ ಮಾಲೀಕರ ಆಸ್ತಿ ತೆರಿಗೆ ಮನ್ನಾಗೆ ಕಾಂಗ್ರೆಸ್‌ ಆಗ್ರಹ

​ಪ್ರಜಾವಾಣಿ ವಾರ್ತೆ
Published 6 ಸೆಪ್ಟೆಂಬರ್ 2020, 20:52 IST
Last Updated 6 ಸೆಪ್ಟೆಂಬರ್ 2020, 20:52 IST
   

ಬೆಂಗಳೂರು: ‘ಕೋವಿಡ್‌ ಕಾರಣದಿಂದ ಬಿಬಿಎಂಪಿಯಲ್ಲಿ ಬರುವ ರೆಸಿಡೆನ್ಸಿಯಲ್‌ ಬಿಲ್ಡಿಂಗ್‌ ಮತ್ತು ಕಮರ್ಷಿಲ್‌ ಬಿಲ್ದಿಂಗ್‌ಗಳ ಮಾಲೀಕರಿಗೆ ಬಾಡಿಗೆ ಬಂದಿಲ್ಲ. ಹೀಗಾಗಿ, ಈ ಮಾಲೀಕರ ಆಸ್ತಿ ತೆರಿಗೆಯನ್ನು ಕಡ್ಡಾಯವಾಗಿ ಮನ್ನಾ ಮಾಡಬೇಕು’ ಎಂದು ಬೆಂಗಳೂರು ಕೇಂದ್ರ ಮತ್ತು ದಕ್ಷಿಣ ಜಿಲ್ಲಾ ಕಾಂಗ್ರೆಸ್‌ ಸಮಿತಿ ಒತ್ತಾಯಿಸಿದೆ.

‘ಬಾಡಿಗೆ ಕೊಡುವ ಅಗತ್ಯ ಇಲ್ಲವೆಂದು ಸರ್ಕಾರವೇ ಹೇಳಿದೆ. ಈ ಪರಿಸ್ಥಿತಿಯಲ್ಲಿ ಆಸ್ತಿ ಮಾಲೀಕರು ತೆರಿಗೆ ಹೇಗೆ ಕಟ್ಟಲು ಸಾಧ್ಯ. ಜೀವನ ಸಾಗಿಸುವುದೇ ಕಷ್ಟವಾಗಿದೆ. ಹೀಗಾಗಿ, ಆಸ್ತಿ ತೆರಿಗೆ ಸಂಪೂರ್ಣ ಮನ್ನಾ ಮಾಡುವಂತೆ ಈಗಾಗಲೇ ಪಕ್ಷದ ಅಧ್ಯಕ್ಷರಾದ ಡಿ.ಕೆ. ಶಿವಕುಮಾರ್‌ ಅವರು ಆಗ್ರಹಿಸಿದ್ದಾರೆ. ಆದರೂ ಸರ್ಕಾರ ಆಸ್ತಿ ಮಾಲೀಕರ ಜೀವನದ ಮೇಲೆ ಚೆಲ್ಲಾಟವಾಡುತ್ತಿದೆ’
ಎಂದು ಕೇಂದ್ರ ಜಿಲ್ಲಾ ಸಮಿತಿಯ ಅಧ್ಯಕ್ಷ ಜಿ. ಶೇಖರ್ ಮತ್ತು ದಕ್ಷಿಣ ಜಿಲ್ಲಾ ಸಮಿತಿಯ ಅಧ್ಯಕ್ಷ ಜಿ. ಕೃಷ್ಣಪ್ಪ ದೂರಿದ್ದಾರೆ.

‘ಕುಂಟುನೆಪ ಹೇಳಿಕೊಂಡು ಮಹಾನಗರ ಪಾಲಿಕೆ ಚುನಾವಣೆಯನ್ನು ಮುಂದೂಡಲು ಸರ್ಕಾರ ಪ್ರಯತ್ನಿಸುತ್ತಿದೆ. ವಾರ್ಡ್‌ಗಳ ಸಂಖ್ಯೆ ಹೆಚ್ಚಾದರೂ ಸರಿಯೇ, ಯಾವುದೇ ಕಾರಣಕ್ಕೂ ಚುನಾವಣೆಯನ್ನು ಪ್ರಜಾಸತ್ತಾತ್ಮಕವಾಗಿ ಸರಿಯಾದ ಸಮಯದಲ್ಲಿ ನಡೆಸಬೇಕು. ಇಲ್ಲ
ವಾದರೆ ನ್ಯಾಯಾಲಯದ ಮೊರೆ ಹೋಗು ತ್ತೇವೆ’ ಎಂದೂ ಎಚ್ಚರಿಕೆ ನೀಡಿದ್ದಾರೆ.

ADVERTISEMENT

‘ಹಳಿ ತಪ್ಪಿರುವ ಶಿಕ್ಷಣ ವ್ಯವಸ್ಥೆಯನ್ನು ಮತ್ತೆ ಸರಿದಾರಿಗೆ ತರಲು ಸರ್ಕಾರ ಯೋಜನೆಗಳನ್ನು ರೂಪಿಸಬೇಕು. ಪಿಯುಸಿಯಲ್ಲಿ ಉತ್ತೀರ್ಣರಾದವರಿಗೆ ಮಾತ್ರ 4 ವರ್ಷದ ಬ್ಯಾಚುಲರ್‌ ಆಫ್‌ ವಿಶ್ಯುವಲ್‌ ಆರ್ಟ್ಸ್‌ (ಬಿವಿಎ) ಪದವಿಗೆ ಪ್ರವೇಶ ನೀಡಬೇಕು. ಆದರೆ, ಹಂಪಿ ವಿಶ್ವವಿದ್ಯಾಲಯ ನಿಯಮ ಉಲ್ಲಂಘಿಸಿ ಎಸ್ಸೆಸ್ಸೆಲ್ಸಿ ಪಾಸಾದವರಿಗೆ ಪ್ರವೇಶ ನೀಡುತ್ತಿದೆ ಎಂದು ಮಾಧ್ಯವ ವರದಿಯಿಂದ ಗೊತ್ತಾಗಿದೆ. ಈ ವಿಷಯ ಸಚಿವರ ಗಮನಕ್ಕೆ ಬಂದಿಲ್ಲವೇ’ ಎಂದೂ ಅವರು ಪ್ರಶ್ನಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.