ADVERTISEMENT

ಬ್ರಾಂಡ್ ಬೆಂಗಳೂರಿಗೆ ಮಸಿ ಬಳಿದಿದ್ದೇ ಸಾಧನೆಯೇ: ಸರ್ಕಾರಕ್ಕೆ ಕಾಂಗ್ರೆಸ್ ಪ್ರಶ್ನೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 7 ನವೆಂಬರ್ 2022, 14:10 IST
Last Updated 7 ನವೆಂಬರ್ 2022, 14:10 IST
   

ಬೆಂಗಳೂರು:ರಸ್ತೆ ಗುಂಡಿಗಳಷ್ಟೇ ಅಲ್ಲ, 40 ಪರ್ಸೆಂಟ್‌ ಸರ್ಕಾರದಲ್ಲಿ ಕಸದ ಸಮಸ್ಯೆಯೂ ಉಲ್ಬಣಿಸಿದೆ.ಬ್ರಾಂಡ್ ಬೆಂಗಳೂರಿಗೆ ಮಸಿ ಬಳಿದಿದ್ದೇ ನಿಮ್ಮ ಸಾಧನೆಯೇ? ಎಂದು ಕಾಂಗ್ರೆಸ್‌ ಪಕ್ಷ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಪ್ರಶ್ನಿಸಿದೆ.

'ಗಬ್ಬು ನಾರುತ್ತಿದೆ ಕಸ, ರೋಗದ ಭೀತಿ!' ಎಂಬ ಶೀರ್ಷಿಕೆಯಲ್ಲಿ ಪ್ರಜಾವಾಣಿಯಲ್ಲಿ ಪ್ರಕಟವಾಗಿರುವ ವರದಿಯನ್ನು ಉಲ್ಲೇಖಿಸಿ ಟ್ವೀಟ್‌ ಮಾಡಿರುವ ಕಾಂಗ್ರೆಸ್‌,ರಸ್ತೆ ಗುಂಡಿಗಳಷ್ಟೇ ಅಲ್ಲ, 40 ಪರ್ಸೆಂಟ್‌ ಸರ್ಕಾರದಲ್ಲಿ ಕಸದ ಸಮಸ್ಯೆಯೂ ಉಲ್ಬಣಿಸಿದೆ.ಕಸ ವಿಲೇವಾರಿ ಘಟಕಗಳು ಕೆಲಸ ಮಾಡುತ್ತಿಲ್ಲ. ಬೆಂಗಳೂರಿನ ಕಸಕ್ಕೆ ಮುಕ್ತಿ ಸಿಗುತ್ತಿಲ್ಲ. ಬಸವರಾಜ ಬೊಮ್ಮಾಯಿ ಅವರೇ,ಬಂಡವಾಳ ಹೂಡಿಕೆದಾರರಿಗೆ ರಸ್ತೆ ಗುಂಡಿ, ಕಸವನ್ನು ತೋರಿಸಿ ಹೂಡಿಕೆ ಮಾಡಲು ಕೇಳಿದಿರಾ?ಬ್ರಾಂಡ್ ಬೆಂಗಳೂರಿಗೆ ಮಸಿ ಬಳಿದಿದ್ದೇ ನಿಮ್ಮ ಸಾಧನೆಯೇ? ಎಂದು ಕೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT