ADVERTISEMENT

ವೇತನ ಸಹಿತ ರಜೆ ಬೇಡಿಕೆ ಪರಿಗಣಿಸಿ: ಹೈಕೋರ್ಟ್‌

​ಪ್ರಜಾವಾಣಿ ವಾರ್ತೆ
Published 22 ಅಕ್ಟೋಬರ್ 2020, 3:00 IST
Last Updated 22 ಅಕ್ಟೋಬರ್ 2020, 3:00 IST

ಬೆಂಗಳೂರು: ಕೋವಿಡ್ ಸೋಂಕಿತ ಕಾರ್ಮಿಕರಿಗೆ ವಿಪತ್ತು ನಿರ್ವಹಣಾ ಕಾಯ್ದೆಯಡಿವೇತನ ಸಹಿತ ರಜೆ ಸೌಲಭ್ಯ ದೊರಕಿಸಲು ಅಗತ್ಯ ನಿರ್ದೇಶನ ನೀಡಬೇಕೆಂಬ ಮನವಿ ಪರಿಗಣಿಸುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್‌ ನಿರ್ದೇಶನ ನೀಡಿದೆ.

ಆಲ್‌ ಇಂಡಿಯಾ ಟ್ರೇಡ್ ಕಾಂಗ್ರೆಸ್‌ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕಾ ನೇತೃತ್ವದ ವಿಭಾಗೀಯ ಪೀಠ, ನೋಟಿಸ್ ನೀಡಲು ಆದೇಶಿಸಿತು.

‘ಇಎಸ್ಐ ಯೋಜನೆಯಡಿ ನೋಂದಣಿಯಾಗದ ಕಾರ್ಮಿಕರಿಗೆ ವೇತನ ಸಹಿತ ರಜೆ ಸೌಲಭ್ಯವಿಲ್ಲ. ಈ ಸಂಬಂಧ ಮಾರ್ಗದರ್ಶಿ ಸೂತ್ರಗಳು(ಎಸ್‌ಒಪಿ) ಇಲ್ಲದಿರುವ ಕಾರಣ ಕಾರ್ಮಿಕರು ತೊಂದರಿಗೆ ಸಿಲುಕಿದ್ದಾರೆ’ ಎಂದು ಅರ್ಜಿದಾರರು ವಿವರಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.