ADVERTISEMENT

ಬೆಂಗಳೂರು ನಗರದಲ್ಲಿ 150 ದಾಟಿದ ಕೋವಿಡ್‌-19 ಪ್ರಕರಣ

​ಪ್ರಜಾವಾಣಿ ವಾರ್ತೆ
Published 4 ಮೇ 2020, 17:25 IST
Last Updated 4 ಮೇ 2020, 17:25 IST
   

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಕೋವಿಡ್‌ 19 ಸೋಂಕಿತರ ಸಂಖ್ಯೆ 150 ದಾಟಿದೆ. ಈ ಪೈಕಿ 60ಕ್ಕೂ ಅಧಿಕ ಪ್ರಕರಣಗಳು ಕೇವಲ ಎರಡೇ ವಾರ್ಡ್‌ಗಳಲ್ಲಿ (ಪಾದರಾಯನಪುರ ಮತ್ತು ಹೊಂಗಸಂದ್ರ) ಪತ್ತೆಯಾಗಿವೆ.

ಬಿಬಿಎಂಪಿಯ ವಾರ್‌ ರೂಮ್‌ ಬಿಡುಗಡೆ ಮಾಡಿರುವ ಅಂಕಿ ಅಂಶಗಳ ಪ್ರಕಾರ ಭಾನುವಾರದವರೆಗೆ 149 ಮಂದಿಯಲ್ಲಿ ಈ ಸೋಂಕು ಪತ್ತೆಯಾಗಿತ್ತು. ಕಳೆದ 24 ಗಂಟೆಗಳಲ್ಲಿ ಮತ್ತೆ ಐವರಲ್ಲಿ ಸೋಂಕು ಪತ್ತೆಯಾಗುವುದರೊಂದಿಗೆ ನಗರಲ್ಲಿ ಒಟ್ಟು 154 ಮಂದಿ ಈ ಸೋಂಕು ಹೊಂದಿದಂತಾಗಿದೆ. ಇವರಲ್ಲಿ 102 ಪುರುಷರು ಹಾಗೂ 52 ಮಹಿಳೆಯರು ಇದ್ದಾರೆ.

ಇದುವರೆಗೆ 48 ಮಹಿಳೆಯರು ಸೇರಿ ಒಟ್ಟು 75 ರೋಗಿಗಳು ಗುಣಮುಖರಾಗಿದ್ದಾರೆ. ಸೋಂಕು ಕಾಣಿಸಿಕೊಂಡ ಏಳು ಮಂದಿ ಮೃತಪಟ್ಟಿದ್ದಾರೆ. ಆರು ಮಂದಿ ಸೋಂಕಿನಿಂದಾಗಿಯೇ ಕೊನೆಯುಸಿರೆಳೆದಿದ್ದರೆ, ಒಬ್ಬ ವ್ಯಕ್ತಿ ಆತಂಕದಿಂದ ಆತ್ಮಹತ್ಯೆ ಮಾಡಿಕೊಂಡಿದ್ದರು.

ADVERTISEMENT

ರೋಗಿಗಳ ಜೊತೆ ನೇರ ಸಂಪರ್ಕ ಹೊಂದಿದ್ದ 1,083 ಮಂದಿಗೆ ಪ್ರತ್ಯೇಕ ವಾಸಕ್ಕೆ ಶಿಫಾರಸು ಮಾಡಲಾಗಿದ್ದು, 597 ಮಂದಿ ಇದನ್ನು ಪೂರ್ಣಗೊಳಿಸಿದ್ದಾರೆ.

ಪರೋಕ್ಷ ಸಂಪರ್ಕ ಹೊಂದಿದ್ದ 4,704 ಮಂದಿಯನ್ನು ಗುರುತಿಸಿ ಕ್ವಾರಂಟೈನ್‌ಗೆ ಶಿಫಾರಸು ಮಾಡಲಾಗಿದ್ದು, 3,901 ಮಂದಿ ಪೂರ್ಣಗೊಳಿಸಿದ್ದಾರೆ.

ಕೋವಿಡ್‌ 19 ಪ್ರಕರಣಗಳು ಪತ್ತೆಯಾದ 21 ವಾರ್ಡ್‌ಗಳ 22 ತಾಣಗಳನ್ನು ನಿಯಂತ್ರಿತ (ಕಂಟೈನ್‌ಮೆಂಟ್‌) ವಲಯಗಳನ್ನಾಗಿ ಗುರುತಿಸಲಾಗಿದೆ. 154 ವಾರ್ಡ್‌ಗಳಲ್ಲಿ ಇದುವರೆಗೆ ಯಾವುದೇ ಪ್ರಕರಣಗಳು ಪತ್ತೆಯಾಗಿಲ್ಲ.

₹ 89,455 ದಂಡ ವಸೂಲಿ

ಮುಖಗವಸು ಧರಿಸದೇ ಸಾರ್ವಜನಿಕ ಪ್ರದೇಶಗಳಲ್ಲಿ ಓಡಾಡಿದ 202 ಮಂದಿಗೆ ಬಿಬಿಎಂಪಿ ಸೋಮವಾರ ದಂಡ ವಿಧಿಸಿದ್ದು, ಒಟ್ಟು ₹ 89,455 ದಂಡ ವಸೂಲಿ ಮಾಡಿದೆ.

ದಂಡ ವಸೂಲಿ ವಿವರ

ವಲಯ; ಪ್ರಕರಣ; ಮೊತ್ತ (₹ಗಳಲ್ಲಿ)

ಪೂರ್ವ; 55; 21,305

ಪಶ್ಚಿಮ; 32; 14,800

ದಕ್ಷಿಣ; 6; 4,100

ಮಹದೇವಪುರ; 18; 15,000

ಆರ್‌.ಆರ್.ನಗರ; 8; 4,900

ಯಲಹಂಕ; 14; 3,150

ದಾಸರಹಳ್ಳಿ; 32;10,000

ಬೊಮ್ಮನಹಳ್ಳಿ 37;16,200

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.