ADVERTISEMENT

ಕೊರೊನಾ ಸೊಂಕು: 60 ವರ್ಷದ ವೃದ್ದೆ ಆತ್ಮಹತ್ಯೆ

​ಪ್ರಜಾವಾಣಿ ವಾರ್ತೆ
Published 17 ಜುಲೈ 2020, 6:22 IST
Last Updated 17 ಜುಲೈ 2020, 6:22 IST
ಕೋವಿಡ್‌–19 ರೋಗಿಗಳ ಆರೈಕೆ ಕೇಂದ್ರವೊಂದರ ದೃಶ್ಯ
ಕೋವಿಡ್‌–19 ರೋಗಿಗಳ ಆರೈಕೆ ಕೇಂದ್ರವೊಂದರ ದೃಶ್ಯ   

ಬೆಂಗಳೂರು: ಕೊರೊನಾ ಸೋಂಕು ತಗುಲಿ ನಗರದ ಕೆ.ಸಿ.ಜನರಲ್ ಆಸ್ಪತ್ರೆಗೆ ದಾಖಲಾಗಿದ್ದ 60 ವರ್ಷದ ವೃದ್ದೆಯೊಬ್ಬರು ಶುಕ್ರವಾರ ಬೆಳಿಗ್ಗೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಮರಿಯಪ್ಪನಪಾಳ್ಯ ನಿವಾಸಿಯಾದ ವೃದ್ಧೆಯನ್ನು ಇತ್ತೀಚಿಗೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮಾನಸಿಕವಾಗಿ ಅವರು ನೊಂದಿದ್ದರು ಎಂದು ಗೊತ್ತಾಗಿದೆ.

ಕೊರೊನಾ ಸೋಂಕಿತರ ಚಿಕಿತ್ಸಾ ವಾರ್ಡ್‌ನಲ್ಲೇ ವೃದ್ಧೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಮಲ್ಲೇಶ್ವರ ಪೊಲೀಸರು ತಿಳಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.