ADVERTISEMENT

ಬಿಬಿಎಂಪಿ: 27 ವಾರ್ಡ್‌ಗಳಲ್ಲಿ ಶೇ 5ಕ್ಕಿಂತ ಹೆಚ್ಚು ಸೋಂಕು ಪತ್ತೆ ದರ

ಕೋವಿಡ್‌: ಸಾವಿನ ದರ 1.59ಕ್ಕೆ ಇಳಿಕೆ

​ಪ್ರಜಾವಾಣಿ ವಾರ್ತೆ
Published 18 ಜೂನ್ 2021, 5:12 IST
Last Updated 18 ಜೂನ್ 2021, 5:12 IST

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಕೋವಿಡ್‌ ಪರೀಕ್ಷೆಗೆ ಒಳಗಾದವರಲ್ಲಿ ಸೋಂಕು ಪತ್ತೆ ದರದ ಸರಾಸರಿಯು ಶೇ 2.32ಕ್ಕೆ ಇಳಿದಿದೆ. ಆದರೆ, 27 ವಾರ್ಡ್‌ಗಳಲ್ಲಿ ಈಗಲೂ ಶೇ 5ಕ್ಕಿಂತ ಹೆಚ್ಚು ಸೊಂಕು ಪತ್ತೆ ದರ ಇದೆ.

ಕೋವಿಡ್‌ ಸೋಂಕು ಪತ್ತೆ ದರ ಅತಿ ಹೆಚ್ಚು ಇರುವುದು ಮತ್ತಿಕೆರೆ (ಶೇ 18.37) ವಾರ್ಡ್‌ನಲ್ಲಿ. ಅದರ ಪಕ್ಕದ ಜೆ.ಪಿ.ಉದ್ಯಾನ ವಾರ್ಡ್‌ನಲ್ಲೂ ಪರೀಕ್ಷೆಗೊಳಗಾದ ಶೇ 16.67ರಷ್ಟು ಮಂದಿಯಲ್ಲಿ ಸೋಂಕು ಪತ್ತೆಯಾಗುತ್ತಿದೆ. ರಾಧಾಕೃಷ್ಣ ದೇವಸ್ಥಾನ, ಸಂಜಯನಗರ, ಡಿ.ಜೆ.ಹಳ್ಳಿ, ಮುನೇಶ್ವರನಗರ, ಪುಲಿಕೇಶಿನಗರ, ಎಸ್‌.ಕೆ.ಗಾರ್ಡನ್‌, ಕತ್ರಿಗುಪ್ಪೆ, ಬಿಟಿಎಂ ಬಡಾವಣೆ, ಜೆ.ಪಿ.ನಗರ ವಾರ್ಡ್‌ಗಳಲ್ಲಿ ಸೊಂಕು ಪತ್ತೆ ದರ ಶೇ 10ಕ್ಕಿಂತಲೂ ಹೆಚ್ಚು ಇದೆ. ಮಹದೇವಪುರ ಹಾಗೂ ಪೂರ್ವ ವಲಯಗಳಲ್ಲಿ ಸೋಂಕು ಪ್ರಮಾಣ ಶೇ 3ಕ್ಕಿಂತ ಹೆಚ್ಚು ಇದೆ. ಅತ್ಯಂತ ಕಡಿಮೆ ಇರುವುದು ದಾಸರಹಳ್ಳಿ ವಲಯದಲ್ಲಿ.

ಜೂನ್‌ ತಿಂಗಳಿನಲ್ಲಿ ಬಿಬಿಎಂಪಿ ಕೋವಿಡ್ ಪರೀಕ್ಷೆಯ ಪ್ರಮಾಣವನ್ನು ಹೆಚ್ಚಿಸಿದೆ. ನಗರದಲ್ಲಿ ಲಾಕ್‌ಡೌನ್‌ ಸಡಿಲಗೊಳಿಸಿದ ಬಳಿಕ ನಿತ್ಯ 60 ಸಾವಿರಕ್ಕೂ ಅಧಿಕ ಮಂದಿಯನ್ನು ಕೋವಿಡ್‌ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. ಗುರುವಾರ 60,478 ಮಂದಿಯ ಪರೀಕ್ಷೆ ನಡೆಸಲಾಗಿದೆ.

ADVERTISEMENT

ಜೂನ್ ತಿಂಗಳ ಆರಂಭದಲ್ಲಿ ಕೋವಿಡ್‌ ರೋಗಿಗಳ ಸಾವಿನ ದರ ಶೇ 7.8ರವರೆಗೆ ತಲುಪಿತ್ತು. ಪ್ರಸ್ತುತ ಕೋವಿಡ್‌ನಿಂದ ಸಾಯುವವರ ಸಾವಿನ ಪ್ರಮಾಣ ಗಣನೀಯವಾಗಿ ಇಳಿಕೆ ಕಂಡಿದೆ. ಬಿಬಿಎಂಪಿ ಗುರುವಾರ ಬಿಡುಗಡೆ ಮಾಡಿರುವ ಅಂಕಿ–ಅಂಶಗಳ ಪ್ರಕಾರ ಕೋವಿಡ್ ರೋಗಿಗಳ ಸಾವಿನ ದರ ಶೇ 1.59. ಕೋವಿಡ್‌ನಿಂದ ಗುರುವಾರ 17 ಮಂದಿ ಕೊನೆಯುಸಿರೆಳೆದಿದ್ದಾರೆ. ಜೂನ್‌ 10ರಿಂದ 16ರವರೆಗೆ ಒಟ್ಟು 156 ಮಂದಿ ಸೊಂಕಿನಿಂದ ಸತ್ತಿದ್ದಾರೆ.ಜೂನ್‌ ತಿಂಗಳ ಮೊದಲ ಆರು ದಿನಗಳಲ್ಲಿ 1,529 ಮಂದಿ ಕೋವಿಡ್‌ನಿಂದ ಮೃತಪಟ್ಟಿದ್ದರು.

ಕೋವಿಡ್‌ನಿಂದ ಆಸ್ಪತ್ರೆಗೆ ದಾಖಲಾಗುವವರ ಪ್ರಮಾಣವೂ ಒಂದಂಕಿಗೆ ಇಳಿದಿದೆ. ಬಿಬಿಎಂಪಿಯ ಚಿಕಿತ್ಸಾ ನಿರ್ಧಾರ ಕೇಂದ್ರಗಳ (ಟ್ರಯಾಜ್‌ ಸೆಂಟರ್‌) ಮೂಲಕ ಗುರುವಾರ ಕೇವಲ ಐವರು ಸೋಂಕಿತರು ಆಸ್ಪತ್ರೆಗಳಿಗೆ ದಾಖಲಾಗಿದ್ದಾರೆ. ಒಬ್ಬರನ್ನು ಕೋವಿಡ್‌ ರೋಗಿಗಳ ಆರೈಕೆ ಕೇಂದ್ರಕ್ಕೆ ದಾಖಲಿಸಲಾಗಿದೆ.

-0-

ಕೋವಿಡ್‌: ಸೋಂಕು ಪತ್ತೆ ದರ ಶೇ 5ಕ್ಕಿಂತ ಹೆಚ್ಚು ಇರುವ ವಾರ್ಡ್‌ಗಳು

(ಜೂನ್‌ 15ರ ದತ್ತಾಂಶದ ಪ್ರಕಾರ)

ವಾರ್ಡ್‌ (ವಾರ್ಡ್‌ ಸಂಖ್ಯೆ); ಸೊಂಕು ಪತ್ತೆ ದರ (%)

ಕೊಡಿಗೆಹಳ್ಳಿ (8); 5.50

ಜೆ.ಪಿ.ಉದ್ಯಾನ (17); 16.67

ರಾಧಾಕೃಷ್ಣ ದೇವಸ್ಥಾನ (18); 13.08

ಸಂಜಯನಗರ (19); 13.08

ಗಂಗಾನಗರ (20); 6.98

ಗಂಗೇನಹಳ್ಳಿ (34); 6.98

ಮತ್ತಿಕೆರೆ (36); 18.37

ಜೆ.ಸಿ.ನಗರ (46); 5.61

ಡಿ.ಜೆ.ಹಳ್ಳಿ (47); 11.34

ಮುನೇಶ್ವರ ನಗರ (48); 11.34

ಲಿಂಗರಾಜಪುರ (49); 5.36

ಕೆ.ಆರ್‌.ಪುರ (52); 9.35

ಬಸವನಪುರ (53); 9.35

ಹೂಡಿ (54); 9.35

ದೇವಸಂದ್ರ (55); 9.35

ಎಸ್‌.ಕೆ.ಗಾರ್ಡನ್‌ (61); 14.43

ರಾಮಸ್ವಾಮಿ ಪಾಳ್ಯ (62); 5.61

ಪುಲಿಕೇಶಿನಗರ (78); 14.43

ರಾಜಾಜಿನಗರ (99); 6.81

ಅಗ್ರಹಾರ ದಾಸರಹಳ್ಳಿ (105); 5.45

ಡಾ.ರಾಜ್‌ಕುಮಾರ್ ವಾರ್ಡ್ (106); 5.45

ಬಿನ್ನಿಪೇಟೆ (121); 7.47

ಕೆಂಪಾಪುರ ಅಗ್ರಹಾರ (122); 7.47

ಹೊಸಕೆರೆಹಳ್ಳಿ (161); 10.91

ಕತ್ರಿಗುಪ್ಪೆ (163); 10.91

ಬಿಟಿಎಂ ಬಡಾವಣೆ (176); 11.43

ಜೆ.ಪಿ.ನಗರ (177); 11.43

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.