ADVERTISEMENT

‘ಗೋಮಾಂಸ ಬೆರೆಸಿ ಮಾಂಸದೂಟ’

‘ಅಲ್‌ ಅಮ್ಮನ್ ಕೆಫೆ’ ಹೋಟೆಲ್‌ ವಿರುದ್ದ ಎಫ್‌ಐಆರ್‌

​ಪ್ರಜಾವಾಣಿ ವಾರ್ತೆ
Published 29 ಆಗಸ್ಟ್ 2019, 19:49 IST
Last Updated 29 ಆಗಸ್ಟ್ 2019, 19:49 IST
   

ಬೆಂಗಳೂರು: ಕುರಿ ಹಾಗೂ ಮೇಕೆ ಮಾಂಸದ ಜೊತೆಗೆ ಗೋಮಾಂಸ ಬೆರೆಸಿ ಅಡುಗೆ ಸಿದ್ಧಪಡಿಸಿ ಗ್ರಾಹಕರಿಗೆ ನೀಡುತ್ತಿದ್ದ ಆರೋಪದಡಿ ‘ಅಲ್‌ ಅಮ್ಮನ್ ಕೆಫೆ’ ಹೋಟೆಲ್‌ ಮಾಲೀಕ ಶಬ್ಬೀರ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.

‘ಆಸ್ಟಿನ್ ಟೌನ್ ನಿವಾಸಿ ಯೇಸುದಾಸ್ ಎಂಬುವರು ನೀಡಿದ್ದ ದೂರಿನಡಿ ಆರೋಪಿ ವಿರುದ್ಧ ಎಫ್‌ಐಆರ್‌ ದಾಖಲಿಸಿಕೊಳ್ಳಲಾಗಿತ್ತು. ಹೋಟೆಲ್‌ನಲ್ಲಿ ಪರಿಶೀಲನೆ ನಡೆಸಿ ಆರೋಪಿಯನ್ನು ಬಂಧಿಸಲಾಗಿದ್ದು, ನ್ಯಾಯಾಲಯಕ್ಕೆ ಹಾಜರುಪಡಿಸಬೇಕಿದೆ’ ಎಂದು ಬಾಣಸವಾಡಿ ಪೊಲೀಸರು ಹೇಳಿದರು.

‘ಕಮ್ಮನಹಳ್ಳಿ ಮುಖ್ಯರಸ್ತೆಯಲ್ಲಿರುವ ಹೋಟೆಲ್‌ಗೆ ಇದೇ 27ರಂದು ಊಟ ಮಾಡಲು ಯೇಸುದಾಸ್ ಹೋಗಿದ್ದರು’ ಎನ್ನಲಾಗಿದೆ.

ADVERTISEMENT

ಊಟದ ವೇಳೆ, ಮಾಂಸವು ಕುರಿ ಹಾಗೂ ಮೇಕೆಯದ್ದಲ್ಲ ಎಂಬುದು ಗೊತ್ತಾಗಿತ್ತು. ಹಸುವಿನ ಮಾಂಸದ ವಾಸನೆಯೂ ಬಂದಿತ್ತು. ಊಟ ಮಾಡದೇ ವಾಪಸ್ ಬಂದಿದ್ದರು’ ಎಂದು ಅವರು ತಿಳಿಸಿದರು.

‘ಮರುದಿನ ಬೆಳಿಗ್ಗೆ 11.30ರ ಸುಮಾರಿಗೆ ಯೇಸುದಾಸ್ ಹಾಗೂ ಸ್ನೇಹಿತರು, ಹೋಟೆಲ್‌ಗೆ ಹೋಗಿದ್ದರು. ಹಸುವಿನ ಮಾಂಸವನ್ನು ಕುರಿ ಹಾಗೂ ಮೇಕೆ ಮಾಂಸದೊಂದಿಗೆ ಬೆರೆಸಿ ಊಟ ತಯಾರಿಸುತ್ತಿದ್ದುದ್ದನ್ನು ಪತ್ತೆ ಮಾಡಿದರು’ ಎಂದು ಅವರು ತಿಳಿಸಿದರು.

‘ಆರೋಪಿ ಶಬ್ಬೀರ್, ಗೋಮಾಂಸ ಬೆರೆಸಿದ್ದ ಊಟವನ್ನೇ ಕುರಿ ಹಾಗೂ ಮೇಕೆ ಮಾಂಸದೂಟವೆಂದು ಹೇಳಿ ಗ್ರಾಹಕರಿಗೆ ನೀಡಿ ವಂಚಿಸುತ್ತಿದ್ದ.’ ಎನ್ನಲಾಗಿದೆ.

‘ಅದರ ಮೂಲಕ ಅಕ್ರಮ ಹಣ ಸಂಪಾದನೆ ಮಾಡುತ್ತಿದ್ದ ಎಂಬ ಸಂಗತಿ ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ’ ಎಂದು ಪೊಲೀಸರು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.