ಬೆಂಗಳೂರು: ‘ಅರಮನೆ ಮೈದಾನದಲ್ಲಿರುವ ‘ಕಿಂಗ್ ಕೋರ್ಟ್’ ಮತ್ತು ‘ನಲಪಾಡ್’ ಕಲ್ಯಾಣ ಮಂಟಪಗಳನ್ನು ಕಡಿಮೆ ದರದಲ್ಲಿ ಭೋಗ್ಯಕ್ಕೆ ಕೊಡಿಸುವುದಾಗಿ ನಂಬಿಸಿದ್ದ ಮಹದೇವ್ ರಾಜ್ ಎಂಬುವರು ₹ 30 ಲಕ್ಷ ಪಡೆದುಕೊಂಡು ವಂಚಿಸಿದ್ದಾರೆ’ ಎಂದು ಆರೋಪಿಸಿ ತೇಜ್‌ಸಿಂಗ್ ಎಂಬುವರು ರಾಮಮೂರ್ತಿ ನಗರ ಠಾಣೆಗೆ ದೂರು ನೀಡಿದ್ದಾರೆ.
‘ವಿದ್ಯಾರಣ್ಯಪುರ ನಿವಾಸಿಯಾದ ಗುತ್ತಿಗೆದಾರ ತೇಜಸಿಂಗ್ ನೀಡಿರುವ ದೂರು ಆಧರಿಸಿ ಮಹದೇವ ರಾಜ್ ವಿರುದ್ಧ ಎಫ್ಐಆರ್ ದಾಖಲಿಸಿಕೊಳ್ಳಲಾಗಿದೆ’ ಎಂದು ಪೊಲೀಸರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.