ADVERTISEMENT

ಬೆಂಗಳೂರಿನಲ್ಲಿ ಸ್ಫೋಟ, ವ್ಯಕ್ತಿ ಸಾವು: ಭಯಪಡುವ ಅಗತ್ಯವಿಲ್ಲ– ಡಿಸಿಪಿ ದೇವರಾಜ್

​ಪ್ರಜಾವಾಣಿ ವಾರ್ತೆ
Published 19 ಮೇ 2019, 9:49 IST
Last Updated 19 ಮೇ 2019, 9:49 IST
ವೆಂಕಟೇಶ್‌ ಅವರ ಮೃತದೇಹ
ವೆಂಕಟೇಶ್‌ ಅವರ ಮೃತದೇಹ   

ಬೆಂಗಳೂರು: ರಾಜರಾಜೇಶ್ವರಿ ನಗರದ ಕಾಂಗ್ರೆಸ್‌ ಶಾಸಕ ಮುನಿರತ್ನ ಅವರ ವೈಯಾಲಿಕಾವಲ್‌ ಮನೆ ಬಳಿ ಸ್ಫೋಟ ಸಂಭವಿಸಿದ್ದು, ಮನೆಗೆಲಸ ಮಾಡುತ್ತಿದ್ದ ವೆಂಕಟೇಶ್‌ (45) ಎಂಬಾತ ಮೃತಪಟ್ಟಿದ್ದಾನೆ.

ಸ್ಫೋಟದ ರಭಸಕ್ಕೆ ಮೃತನ ದೇಹ ಛಿದ್ರವಾಗಿದೆ. ಸದ್ಯ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

ಮೃತ ವೆಂಕಟೇಶ್ವೈಯಾಲಿಕಾವಲ್‌ನದೋಬಿಗಾಟ್‌ನಲ್ಲಿ ಕುಟುಂಬಸ್ಥರ ಜೊತೆ ವಾಸವಾಗಿದ್ದರು. ಅವರು ಬೆಳ್ಳಿಗೆಹತ್ತು ಗಂಟೆ ಸುಮಾರಿಗೆ ಮೊಬೈಲ್‌ನಲ್ಲಿ ಮಾತನಾಡುತ್ತಾ ಮುನಿರತ್ನ ಮನೆ ಮುಂದೆ ಹೋಗುತ್ತಿದ್ದರು.ಇದ್ದಕ್ಕಿದ್ದಂತೆ ಅನುಮಾನಾಸ್ಪದ ವಸ್ತು ಸ್ಫೋಟಗೊಂಡಿದೆ.

ADVERTISEMENT

ಸ್ಫೋಟದ ತೀವ್ರತೆಗೆಆತನ ಮೊಬೈಲ್‌, ಮನೆಯ ಬಾಗಿಲು ಹಾಗೂ ಗೋಡೆ ಛಿದ್ರವಾಗಿದೆ.

ಕಮಿಷನರ್‌ ಟಿ. ಸುನೀಲ್ ಕುಮಾರ್ ಹೇಳಿಕೆ
‘ವೆಂಕಟೇಶ್‌ ಬೆಳಿಗ್ಗೆ 9-15ಕ್ಕೆ ನಡೆದುಕೊಂಡು ಹೋಗುತ್ತಿದ್ದಾಗ ಸ್ಫೋಟ ಸಂಭವಿಸಿದೆ. ಭೂಮಿಯೊಳಗಿಂದ ಕ್ರೇಟ್ ಮಾದರಿಯ ವಸ್ತು ಸ್ಫೋಟ ಆಗಿರೋದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಎಫ್‌ಎಸ್‌ಎಲ್‌ ತಂಡ ಪರಿಶೀಲನೆ ನಡೆಸಿದ ಬಳಿಕ ಘಟನೆಗೆ ಕಾರಣ ತಿಳಿಯಲಿದೆ. ಎನ್‌ಐಎ ಸೇರಿದಂತೆ ಎಲ್ಲಾ ತನಿಖಾ ತಂಡಗಳಿಗೂ ವಿಚಾರ ಮುಟ್ಟಿಸಲಾಗುವುದು’ ಎಂದು ಹೇಳಿದರು.

ಭಯಪಡುವ ಅಗತ್ಯವಿಲ್ಲ: ಡಿಸಿಪಿ ದೇವರಾಜ್

ಯಾವುದೇ ಭಯಪಡುವ ಅಗತ್ಯವಿಲ್ಲ. ಪ್ಲ್ಯಾಸ್ಟಿಕ್‌‌ಗೆ ಬಳಸುವ ಕೆಲ ಕೆಮಿಕಲ್ ಬಳಸಿದ್ರಿಂದ ಹೀಗೆ ಆಗಿದೆ ಎಂದು ಡಿಸಿಪಿ ದೇವರಾಜ್‌ ಹೇಳಿದ್ದಾರೆ.

ಸದ್ಯ ಮೃತ ದೇಹ ಪೋಸ್ಟ್ ಮಾರ್ಟಮ್ ನಡಿತಿದೆ. ಜತೆಗೆ ನಿವೃತ್ತ ಎಫ್‌ಎಸ್‌ಎಲ್‌ತಜ್ಞ ರವೀಂದ್ರ ಅವರು ಸಹ ಇಡೀಸ್ಥಳ ಪರಿಶೀಲನೆ ನಡಿಸಿದ್ದಾರೆ. ಇದು ಸ್ಫೋಟಗೊಂಡ ಹಿನ್ನೆಲೆ ಸುಮೊಟೊ ಕೇಸ್ ದಾಖಲು ಮಾಡಿಕೊಳ್ಳಲಿದ್ದೇವೆ ಎಂದು ಹೇಳಿದರು.

ಕೆಮಿಕಲ್ ಎಕ್ಸ್‌ಪ್ಲೂಸಿವ್ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಿದ್ದೇವೆ‌. ಸದ್ಯ ಈಗಲೇ ಎಲ್ಲವನ್ನೂ ಹೇಳಲು ಸಾಧ್ಯವಿಲ್ಲ. ಒಮ್ಮೆ ಎಲ್ಲವೂ ಪರಿಶೀಲನೆ ನಡೆದ ಬಳಿಕ ಎಲ್ಲವೂ ತಿಳಿದು ಬರಲಿದೆ ಎಂದು ಅವರು ಮಾಹಿತಿ ನೀಡಿದರು.

ಶಾಸಕ ಮುನಿರತ್ನ ಹೇಳಿಕೆ
‘ಯಾವುದೇ ವಿಷಯ ಆಗಿರಲಿ ಊಹಾಪೋಹದ ಬಗ್ಗೆ ಚರ್ಚೆ ಮಾಡುವುದುಬೇಡ. ಪೊಲೀಸರ ತನಿಖೆಗೆ ಸಹಕಾರ ನೀಡಬೇಕಾಗಿದೆ. ಪೊಲೀಸರು ಪ್ರಮಾಣಿಕವಾಗಿ ತನಿಖೆ ಮಾಡುತ್ತಾರೆ. ವೆಂಕಟೇಶ್ ತಂದೆ ನನ್ನ ತಂದೆ ಬಾಲ್ಯ ಸ್ನೇಹಿತರು, ನಾವು ಕೂಡ ಜೊತೆಯಲ್ಲೇ ಬೆಳೆದವರು. ಆತನಿಗೆ ಹೀಗೆ ಆಗಿರುವುದು ಮನಸ್ಸಿಗೆ ಬಹಳ ನೋವಾಗಿದೆ’ ಎಂದು ಹೇಳಿದರು.

ಘಟನೆ ನಡೆದ ಸ್ಥಳದಲ್ಲಿ ಪೊಲೀಸರುಪರಿಶೀಲನೆ ನಡೆಸುತ್ತಿದ್ದಾರೆ.
ವೆಂಕಟೇಶ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.