ADVERTISEMENT

ಬಾಣಸಿಗರ ನಡುವೆ ಗಲಾಟೆ:ಕೊಲೆಯಲ್ಲಿ ಅಂತ್ಯ

​ಪ್ರಜಾವಾಣಿ ವಾರ್ತೆ
Published 21 ಮಾರ್ಚ್ 2021, 20:49 IST
Last Updated 21 ಮಾರ್ಚ್ 2021, 20:49 IST

ಬೆಂಗಳೂರು: ಅಡುಗೆ ತಯಾರಿಸುವ ವಿಚಾರದಲ್ಲಿ ಬಾಣಸಿಗರಿಬ್ಬರ ನಡುವೆ ನಡೆದ ಜಗಳದಲ್ಲಿ ಒಬ್ಬ ಕೊಲೆಯಾಗಿರುವ ಘಟನೆ ಜೆ.ಪಿ.ನಗರ ಠಾಣಾ ವ್ಯಾಪ್ತಿಯ ವಾಲ್‌ಸ್ಟ್ರೀಟ್‌ ಪಬ್‌ನಲ್ಲಿ ನಡೆದಿದೆ.

ಪಶ್ಚಿಮ ಬಂಗಾಳದ ಸಾಗರ್ (22) ಮೃತಪಟ್ಟಿರುವ ಬಾಣಸಿಗ. ಮೌಸಿಕ್ ಚಾಕುವಿನಿಂದ ಇರಿದು ಪರಾರಿಯಾಗಿರುವ ಆರೋಪಿ.

‘ಸಾಗರ್ ಹಾಗೂ ಮೌಸಿಕ್ ಪಬ್‌ನಲ್ಲಿ ಶೆಫ್‌ಗಳಾಗಿ (ಬಾಣಸಿಗ) ಕೆಲಸ ಮಾಡುತ್ತಿದ್ದರು. ಶನಿವಾರ ರಾತ್ರಿ ಅಡುಗೆ ಮಾಡುವ ವಿಚಾರವಾಗಿ ಇಬ್ಬರ ನಡುವೆ ಜಗಳ ನಡೆದಿತ್ತು’.

ADVERTISEMENT

‘ಸರಿಯಾಗಿ ಕೆಲಸ ಮಾಡುತ್ತಿಲ್ಲವೆಂದು ಮೌಸಿಕ್ ಮೇಲೆ ಸಾಗರ್‌ ಗಲಾಟೆ ಮಾಡಿದ್ದ. ಈ ವೇಳೆ ಕೋಪಗೊಂಡಿದ್ದಮೌಸಿಕ್‌, ಚಾಕುವಿನಿಂದ ಸಾಗರ್‌ ಅವರ ಹೊಟ್ಟೆ ಮತ್ತು ಎದೆಯ ಭಾಗಕ್ಕೆ ಇರಿದಿದ್ದ.‌ಗಾಯಗೊಂಡಿದ್ದ ಸಾಗರ್‌ ಅವರನ್ನುಕೂಡಲೇ ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿಸಿದರೂ, ಚಿಕಿತ್ಸೆ ಫಲಿಸದೆ ಮೃತಪಟ್ಟರು’ ಎಂದು ಮೂಲಗಳು ತಿಳಿಸಿವೆ.

ಘಟನೆ ನಂತರಮೌಸಿಕ್ ಅಲ್ಲಿಂದ ಪರಾರಿಯಾಗಿದ್ದು, ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ಈ ಸಂಬಂಧ ಜೆ.ಪಿ.ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.