ADVERTISEMENT

ಗ್ರಾಹಕರ ಸೋಗಿನಲ್ಲಿ ಕಳ್ಳತನ: ಮಹಿಳೆ ಬಂಧನ

​ಪ್ರಜಾವಾಣಿ ವಾರ್ತೆ
Published 7 ನವೆಂಬರ್ 2022, 19:32 IST
Last Updated 7 ನವೆಂಬರ್ 2022, 19:32 IST

ಬೆಂಗಳೂರು: ಗ್ರಾಹಕರ ಸೋಗಿನಲ್ಲಿ ಚಿನ್ನಾಭರಣ ಅಂಗಡಿಗೆ ಹೋಗಿ ಕಳ್ಳತನ ಮಾಡಿದ್ದ ಆರೋಪದಡಿ ನಾದಿಯಾ ಎಂಬುವವರನ್ನು ಯಶವಂತಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.

‘ಸ್ಥಳೀಯ ನಿವಾಸಿ ನಾದಿಯಾ ಅ. 19ರಂದು ಕೃತ್ಯ ಎಸಗಿ ಪರಾರಿಯಾಗಿದ್ದರು. ಮಹಾವೀರ್ ಜ್ಯುವೆಲರ್ಸ್ ಮಳಿಗೆ ಮಾಲೀಕ ವಿಶಾಲ್ ನೀಡಿದ್ದ ದೂರಿನಡಿ ತನಿಖೆ ಕೈಗೊಂಡು ಆರೋಪಿಯನ್ನು ಬಂಧಿಸಲಾಗಿದೆ. ₹ 3.20 ಲಕ್ಷ ಮೌಲ್ಯದ ಚಿನ್ನಾಭರಣ ಜಪ್ತಿ ಮಾಡಲಾಗಿದೆ’ ಎಂದು ಪೊಲೀಸರು ಹೇಳಿದರು.

‘ಮಕ್ಕಳ ಚಿನ್ನದ ಉಂಗುರ ಬೇಕಿರುವುದಾಗಿ ಹೇಳಿ ನಾದಿಯಾ ಮಳಿಗೆಗೆ ಬಂದಿದ್ದರು. ಮಳಿಗೆ ಸಿಬ್ಬಂದಿ ಚಿನ್ನದ ಉಂಗುರ ತೋರಿಸುತ್ತಿದ್ದರು. ಅವರ ಗಮನ ಬೇರೆಡೆ ಸೆಳೆದ ನಾದಿಯಾ, ಚಿನ್ನಾಭರಣ ಕದ್ದು ವ್ಯಾನಿಟಿ ಬ್ಯಾಗ್‌ನಲ್ಲಿಟ್ಟುಕೊಂಡಿದ್ದರು. ಕೆಲ ಹೊತ್ತಿನ ನಂತರ, ಯಾವುದೇ ಉಂಗುರ ಬೇಡವೆಂದು ಹೇಳಿ ಹೊರಟು ಹೋಗಿದ್ದರು.’

ADVERTISEMENT

‘ಆರೋಪಿಯ ಕೃತ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ದೃಶ್ಯ ಆಧರಿಸಿ ತನಿಖೆ ಕೈಗೊಂಡಾಗ ನಾದಿಯಾ ಸಿಕ್ಕಿಬಿದ್ದರು. ಯಶವಂತಪುರ, ಜೀವನ್‌ಬಿಮಾ ನಗರ ಹಾಗೂ ಜಾಲಹಳ್ಳಿ ಠಾಣೆ ವ್ಯಾಪ್ತಿಯಲ್ಲೂ ಆರೋಪಿ ಕಳ್ಳತನ ಮಾಡಿರುವುದು ತನಿಖೆಯಿಂದ ಗೊತ್ತಾಗಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.