ADVERTISEMENT

ಯುವತಿಯರು-ಉಪನ್ಯಾಸಕಿಯರ ಫೋಟೊ ಅಪ್‌ಲೋಡ್; ಎಂಜಿನಿಯರ್ ಸೇರಿ ಇಬ್ಬರ ಬಂಧನ

​ಪ್ರಜಾವಾಣಿ ವಾರ್ತೆ
Published 30 ಜುಲೈ 2020, 8:29 IST
Last Updated 30 ಜುಲೈ 2020, 8:29 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಯುವತಿಯರು ಹಾಗೂ ಉಪನ್ಯಾಸಕಿಯರ ಫೋಟೊಗಳನ್ನು ಸಾಮಾಜಿಕ ಜಾಲತಾಣ ಹಾಗೂ ಅಶ್ಲೀಲ ಜಾಲತಾಣಗಳಲ್ಲಿ ಅಪ್‌ಲೋಡ್ ಮಾಡಿದ್ದ ಆರೋಪದಡಿ ಎಂಜಿನಿಯರ್ ಸೇರಿ ಇಬ್ಬರನ್ನು ಬಂಧಿಸಲಾಗಿದೆ.

ಸಿ.ವಿ.ರಾಮನ್ ನಗರದ ಅಜಯ್ ತನಿಕಾಚಲಂ (37) ಹಾಗೂ ರಾಜಾಜಿನಗರದ ವಿಶ್ವಕ್ ಸೇನ್ (27) ಬಂಧಿತರು. ಆರೋಪಿಗಳಿಂದ ಲ್ಯಾಪ್‌ಟಾಪ್ ಹಾಗೂ ಮೊಬೈಲ್ ಜಪ್ತಿ ಮಾಡಲಾಗಿದೆ.

‘ಫೇಸ್‌ಬುಕ್,ಇನ್‌ಸ್ಟಾಗ್ರಾಂ ಹಾಗೂ ಹಲವು ಸಾಮಾಜಿಕ ಜಾಲತಾಣದಲ್ಲಿ ಯುವತಿಯರು ಹಾಗೂ ಉಪನ್ಯಾಸಕಿಯರು ಅಪ್‌ಲೋಡ್ ಮಾಡುತ್ತಿದ್ದ ಫೋಟೊಗಳನ್ನೇ ಆರೋಪಿಗಳು ಕದ್ದಿದ್ದರು. ಅದನ್ನೇ ಕೆಟ್ಟದಾಗಿ ಬಿಂಬಿಸಿ ಸಾಮಾಜಿಕ ಜಾಲತಾಣ ಹಾಗೂ ಅಶ್ಲೀಲ ಜಾಲತಾಣಗಳಲ್ಲಿ ಅಪ್‌ಲೋಡ್ ಮಾಡುತ್ತಿದ್ದರು. ಈ ಸಂಬಂಧ ಸೈಬರ್ ಕ್ರೈಂನಲ್ಲಿ ಪ್ರಕರಣ ದಾಖಲಾಗಿತ್ತು’ಎಂದು ಪೊಲೀಸರು ಹೇಳಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.