ADVERTISEMENT

ಸಿಟಿಓ ವೃತ್ತದ ಸಿಗ್ನಲ್‌ನಲ್ಲೇ ಕಳವು

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2020, 21:20 IST
Last Updated 18 ಫೆಬ್ರುವರಿ 2020, 21:20 IST

ಬೆಂಗಳೂರು: ಕಬ್ಬನ್‌ ಪಾರ್ಕ್ ಮೆಟ್ರೊ ನಿಲ್ದಾಣ ಎದುರಿನ ಸಿಟಿಓ ವೃತ್ತದ ಸಿಗ್ನಲ್‌ನಲ್ಲಿ ನಿಂತಿದ್ದಕಾರಿನ ಚಾಲಕನ ಗಮನ ಬೇರೆಡೆ ಸೆಳೆದು ಮೊಬೈಲ್ ಕಳವು ಮಾಡಲಾಗಿದ್ದು, ಕಮರ್ಷಿಯಲ್ ಸ್ಟ್ರೀಟ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮತ್ತೀಕೆರೆಯ ಹೇಮಾಂಶು ಮೋಟಾ ಎಂಬುವರು ದೂರು ನೀಡಿದ್ದಾರೆ. ಇಬ್ಬರು ಅಪರಿಚಿತರ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ.

‘ಸೋಮವಾರ ಬೆಳಿಗ್ಗೆ 9ರ ಸುಮಾರಿಗೆ ಹೇಮಾಂಶು, ಕಾರಿನಲ್ಲಿ ಸಿಟಿಓ ವೃತ್ತಕ್ಕೆ ಬಂದಿದ್ದರು. ಕೆಂಪು ಸಿಗ್ನಲ್‌ ಇದ್ದಿದ್ದರಿಂದ ಕಾಯುತ್ತ ನಿಂತಿದ್ದರು. ಅದೇ ವೇಳೆ ಬೈಕ್‌ನಲ್ಲಿ ಬಂದಿದ್ದ ಇಬ್ಬರು, ‘ನಿಮ್ಮ ಕಾರಿನಿಂದ ದಟ್ಟಣೆ ಉಂಟಾಗುತ್ತಿದೆಮುಂದಕ್ಕೆ ಹೋಗಿ’ ಎಂದು ಹೇಳಿ ಗಮನ ಬೇರೆಡೆ ಸೆಳೆದು ಕಿಟಕಿ ಮೂಲಕ ಮೊಬೈಲ್ ಕದ್ದುಕೊಂಡು ಹೋಗಿದ್ದಾರೆ’ ಎಂದು ಪೊಲೀಸರು ತಿಳಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.