ADVERTISEMENT

ಕಬ್ಬನ್‌ ಉದ್ಯಾನ| ಕಟ್ಟಡಗಳ ನವೀಕರಣದಿಂದ ಪರಿಸರಕ್ಕೆ ಹಾನಿ: ನಡಿಗೆದಾರರ ಸಂಘ ಆರೋಪ

​ಪ್ರಜಾವಾಣಿ ವಾರ್ತೆ
Published 19 ಮಾರ್ಚ್ 2023, 20:58 IST
Last Updated 19 ಮಾರ್ಚ್ 2023, 20:58 IST
   

ಬೆಂಗಳೂರು: ‘ಕಬ್ಬನ್‌ ಉದ್ಯಾನ ದಲ್ಲಿ ಇತ್ತೀಚೆಗೆ ಕಾಂಕ್ರೀಟ್‌ ಕಟ್ಟಡ ಗಳನ್ನು ನವೀಕರಣ ಮಾಡಲಾಗು ತ್ತಿದೆ. ಇದರಿಂದ ಉದ್ಯಾನದ ಪರಿಸರಕ್ಕೆ ಹಾನಿಯಾಗಲಿದೆ’ ಎಂದು ಕಬ್ಬನ್‌ ಉದ್ಯಾನದ ನಡಿಗೆದಾರರ ಸಂಘ ಆರೋಪಿಸಿದೆ.

‘ಶಾರ್ಟ್‌ ಸರ್ಕ್ಯೂಟ್‌ನಿಂದ ಒಂದಷ್ಟು ಭಾಗ ಸುಟ್ಟಿದೆ ಎಂಬ ಕಾರಣಕ್ಕೆ ಅಕ್ವೇರಿಯಂ ಕಟ್ಟಡ, ಎನ್‌.ಜಿ.ಒ ಕ್ಲಬ್‌ ಮತ್ತು ಟೆನ್ನಿಸ್‌ ಕ್ಲಬ್‌ಗಳನ್ನು ಸ್ಟಾರ್‌ ಹೋಟೆಲ್‌ ರೀತಿಯಲ್ಲಿ ಪುನರ್‌ ನಿರ್ಮಿಸಲಾಗುತ್ತಿದೆ. ಲೋಕಪಯೋಗಿ ಇಲಾಖೆ, ಪೊಲೀಸ್‌ ಕಚೇರಿ, ಸೆಂಚುರಿ ಕ್ಲಬ್, ಬಾಲಭವನ ಹೀಗೆ ಕಬ್ಬನ್‌ ಉದ್ಯಾನದಲ್ಲಿರುವ ಬಹುತೇಕ ಎಲ್ಲ ಕಟ್ಟಡಗಳನ್ನು ನವೀಕರಿಸಲಾಗುತ್ತಿದೆ. ಇದನ್ನು ತೋಟಗಾರಿಕೆ ಇಲಾಖೆ ಅಧಿಕಾರಿಗಳು ಪ್ರಶ್ನಿಸು ತ್ತಿಲ್ಲ. ಇದರಿಂದ ಉದ್ಯಾನದ ಸೌಂದರ್ಯಕ್ಕೆ ಧಕ್ಕೆಯಾಗಲಿದೆ’ ಎಂದು ನಡಿಗೆದಾರರ ಸಂಘದ ಅಧ್ಯಕ್ಷ ಎಸ್. ಉಮೇಶ್ ಹೇಳಿದರು.

‘ತೋಟಗಾರಿಕೆ ಇಲಾಖೆಯ ಅಧಿಕಾರಿಗಳ ನಿರ್ಲಕ್ಷ್ಯದಿಂದ ಉದ್ಯಾನವನ್ನು ಸಂಪೂರ್ಣ ಕಾಂಕ್ರೀಟ್‌ ಕಾಡಾಗಿ ಪರಿವರ್ತಿಸ ಲಾಗುತ್ತಿದೆ. ಸರ್ಕಾರ ಕೂಡಲೇ ಕಬ್ಬನ್‌ ಉದ್ಯಾನದ ರಕ್ಷಣೆಗೆ ಮುಂದಾಗಬೇಕು’ ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.