ADVERTISEMENT

ವಿಶೇಷ ಜಿಲ್ಲಾಧಿಕಾರಿ, ಸಿಐಡಿ ಡಿವೈಎಸ್ಪಿ ಹೆಸರಿನಲ್ಲಿ ನಕಲಿ ಖಾತೆ

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2020, 16:29 IST
Last Updated 17 ಸೆಪ್ಟೆಂಬರ್ 2020, 16:29 IST

ಬೆಂಗಳೂರು: ಬೆಂಗಳೂರು ಉತ್ತರ ವಿಶೇಷ ಜಿಲ್ಲಾಧಿಕಾರಿ ಎಂ.ಕೆ.ಜಗದೀಶ್ ಮತ್ತು ಸಿಐಡಿ ಆರ್ಥಿಕ ವಿಭಾಗದ ಡಿವೈಎಸ್ಪಿ ಎಂ.ಎಚ್.ನಾಗ್ಟೆ ಅವರ ಹೆಸರು ಹಾಗೂ ಪೋಟೊ ಬಳಸಿಕೊಂಡು ಫೇಸ್‌ಬುಕ್‌ನಲ್ಲಿ ನಕಲಿ ಖಾತೆ ತೆರೆಯಲಾಗಿದ್ದು, ಈ ಸಂಬಂಧ ಸಿಐಡಿ ಸೈಬರ್ ವಿಭಾಗದಲ್ಲಿ ದೂರು ದಾಖಲಾಗಿದೆ.

‘ಅಸಲಿ ಖಾತೆಯಲ್ಲಿದ್ದ ಫೋಟೊವನ್ನು ಕದ್ದಿರುವ ವಂಚಕರು, ಅದೇ ಫೋಟೊವನ್ನೇ ನಕಲಿ ಖಾತೆಗೆ ಅಪ್‌ಲೋಡ್ ಮಾಡಿದ್ದಾರೆ. ಆಖಾತೆಯಿಂದ ಸ್ನೇಹಿತರು ಹಾಗೂ ಸಂಬಂಧಿಕರಿಗೆವಿಶೇಷ ಜಿಲ್ಲಾಧಿಕಾರಿ ಹಾಗೂ ಡಿವೈಎಸ್ಪಿ ಅವರ ಹೆಸರಿನಲ್ಲೇ ಸಂದೇಶ ಕಳುಹಿಸಿ ವಂಚಿಸಲಾಗಿದೆ’ ಎಂದು ಸೈಬರ್ ವಿಭಾಗದ ಮೂಲಗಳು ತಿಳಿಸಿವೆ.

‘ನಾನು ಕಷ್ಟದಲ್ಲಿದ್ದೇನೆ. ಸಹಾಯ ಬೇಕಿತ್ತು. ತುರ್ತಾಗಿ ಹಣ ಕಳುಹಿಸಿ’ ಎಂದು ಸಂದೇಶದಲ್ಲಿ ವಂಚಕರು ಬರೆದಿದ್ದಾರೆ. ಅದನ್ನು ನಿಜವೆಂದು ತಿಳಿದ ಕೆಲವರು, ವಂಚಕರು ನೀಡಿದ್ದ ಖಾತೆಗೆ ಹಣ ಜಮೆ ಮಾಡಿದ್ದಾರೆ’ ಎಂದೂ ಮೂಲಗಳು ಹೇಳಿವೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.