ದಾಬಸ್‌ಪೇಟೆ: ಸೋಂಪುರ ಹೋಬಳಿ ಹೊನ್ನೇನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದೇವಗಾನಹಳ್ಳಿ ರಸ್ತೆಯಲ್ಲಿ ಚರಂಡಿ ನೀರು ಹರಿಯುತ್ತಿದ್ದು, ಸಾರ್ವಜನಿಕರಿಗೆ ತೊಂದರೆ ಉಂಟಾಗಿದೆ.
ದಾಬಸ್‌ಪೇಟೆ-ಶಿವಗಂಗೆ ರಸ್ತೆಯಿಂದ ಬರಗೇನಹಳ್ಳಿ ಗ್ರಾಮದ ಪಕ್ಕ ಸಾಗುವ ರಸ್ತೆಯಲ್ಲಿ ಸೂಕ್ತ ಚರಂಡಿ ವ್ಯವಸ್ಥೆ ಇಲ್ಲದ ಕಾರಣ ಗಲೀಜು ನೀರು ರಸ್ತೆ ಮೇಲೆ ಹರಿಯುತ್ತಿದೆ. ರಸ್ತೆಯಲ್ಲಿ ಗುಂಡಿ ಬಿದ್ದಿದ್ದು, ನೀರು ನಿಂತು ವಾಹನ ಸಂಚಾರಕ್ಕೆ ಅಡ್ಡಿಯಾಗಿದೆ.
ಈ ರಸ್ತೆ ದೇವಗಾನಹಳ್ಳಿ ಹಾಗೂ ಇತರೆ ಎರಡು ಗ್ರಾಮಗಳು ಮತ್ತು ದೇವರ ಕೆರೆ ಸಂಪರ್ಕಿಸುತ್ತದೆ.
ನಿತ್ಯ ಇದೇ ರಸ್ತೆಯಲ್ಲಿ ಶಾಲಾ ವಾಹನಗಳು, ಹಾಲಿನ ವಾಹನ ಸಂಚರಿಸುತ್ತವೆ. ಮೂರು ಗ್ರಾಮಗಳ ಜನರಿಗೆ ಇದೇ ಪ್ರಮುಖ ಮಾರ್ಗ. ಸಂಬಂಧಪಟ್ಟ ಅಧಿಕಾರಿಗಳು, ಚರಂಡಿ ನೀರು ರಸ್ತೆಗೆ ಬಾರದಂತೆ ತಡೆದು, ಗುಂಡಿಗೆ ಮಣ್ಣು ಹಾಕಿ ಸುಗಮ ಓಡಾಟಕ್ಕೆ ಅನುಕೂಲ ಮಾಡಿಕೊಡಬೇಕು ಎಂದು ನಿವಾಸಿ ಮಂಜುನಾಥ್ ಆಗ್ರಹಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.